ದುರಿತಗಜ ಪಂಚಾನನ ನರಹರಿಯೆ sripadarajaru duritagaja panchanana

 


Restart mobile & try if the above audio is not playing

ಶ್ರೀ ಶ್ರೀಪಾದರಾಜರ ಕೃತ

ರಾಗ : ಶುಭಪಂತುವರಾಳಿ


ದುರಿತಗಜ ಪಂಚಾನನ-

ನರಹರಿಯೆ ದೇವರ ದೇವ ಕಾಯೊ ಗೋವಿಂದ ||pa||


ಹೆಸರುಳ್ಳ ನದಿಗಳು ಒಳಗೊಂಬೊ ಸಮುದ್ರನು

ಬಿಸುಡುವನೆ ಕಾಲುಹೊಳೆಗಳ ಗೋವಿಂದ lla.pll


ಹೆತ್ತ ಮಕ್ಕಳು ಹುಚ್ಚರಾದರೆ ತಾಯ್ತಂದೆ

ಎತ್ತದೆ ನೆಲಕೆ ಬಿಸುಡುವರೆ ಗೋವಿಂದ

ಒಂದು ಮೊಲಕೆ ಆರು ಹುಲಿ ಬಂದುಕವಿದಿದೆ

ಬಂಧನವ ಬಿಡೆಸೆನ್ನ ತಂದೆ ಗೋವಿಂದ ll1ll


ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆ

ನಿನ್ನನು ಓಲೈಸಲ್ಯಾಕೆ ಗೋವಿಂದ

ಆಪತ್ತು ತಾಪತ್ರಯ ಬೆನ್ನ ಬಿಡದಿದ್ದರೆ

ಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ ll2l


ಅರಸು ಮುಟ್ಟಲು ದಾಸಿ ರಂಭೆಯಾದಳು ದೇವ

ಪರಶು ಮುಟ್ಟಲು ಲೋಹ ಸ್ವರ್ಣ ಗೋವಿಂದ

ಮಾನಾಭಿಮಾನದೊಡೆಯ ಶ್ರೀರಂಗವಿಠಲ 

ಜ್ಞಾನಿಗಳ ಅರಸನೆ ಕಾಯೋ ಗೋವಿಂದ॥3ll

***

Comments