ಕಂದನೇಕೆ ಮಲಗನೆ ಕೇಳೆಲೆ ಸಖಿ purandara dasaru kandaneke malagane kelele
Restart mobile & try if the above audio is not playing
ಶ್ರೀ ಶ್ರೀಪುರಂದರದಾಸರ ಕೃತಿ
ರಾಗ : ದೇಶ್ ಆದಿತಾಳ
ಕಂದನೇಕೆ ಮಲಗನೆ ಕೇಳೆಲೆ ಸಖಿ ||ಪ||
ಕಾಯಜಜನಕಗೆ ಏನಾಯಿತು ಇವಗೆ
ಯಾವಳ ದೃಷ್ಟಿ ತಾಗಿತೆ ||ಅ||
ಕಂದನೇಕೆ ಕಣ್ಣ ಮುಚ್ಚನೆ ಇಂದು
ನೀರದಡದಲ್ಲಿರುವನೆ ,
ಏನೆಂದರು ಮುಖವೆತ್ತಿ ನೋಡನೆ ,
ಗೋವಿಂದ ಬಾ ಎಂದರೆ ಬಾಯ ತೆರೆವನೆ ॥೧॥
ತನಯನಾಗಿ ಧರೆ ಅಳೆದನೆ , ತನ್ನ
ಜನನಿಯ ಕಂಡರೆ ಸೇರನೆ
ಮುನಿಗಳಂತೆ ಮೌನ ಪಿಡಿದನೆ
ಘನ ಗೋವು ಕಾಯ್ವಾಗ ಗಾಳಿ ಸೋಕಿತೇನೆ ॥೨॥
ಸುಮ್ಮನೇತಕೆ ವ್ರತ ಕೆಡಿಸಿದನೆ
ಹಮ್ಮಿನಿಂದಲಿ ಖಡ್ಗ ಪಿಡಿದನೆ
ಜನ್ಮಜನ್ಮಗಳಲ್ಲಿ ಬಿಡದಲಿರುವ ನೀಬಾರೊ
ಬೊಮ್ಮ ಶ್ರೀ ಪುರಂದರವಿಠಲ ॥೩॥
**
.jpeg)
Comments
Post a Comment