ಬಾರಯ್ಯ ವೆಂಕಟರಮಣ ಭಾಗ್ಯದ ನಿಧಿಯೇ purandara dasaru barayya venkataramana bhagyada nidhiye


Restart mobile & try if the above audio is not playing

Purandara dasaru

Raga : shankarabharana  Aditala


ಬಾರಯ್ಯ ವೆಂಕಟರಮಣ ಭಾಗ್ಯದ ನಿಧಿಯೇ || ಪ ||


ಬಾರೋ ವಿಶ್ವಂಭರನೇ ಬಾರೋ

ಭಕ್ತರ ಸಲಹುವನೇ ಬಾರೋ || ಅ.ಪ ||


ವೇದಗೋಚರನೇ ಬಾರೋ

ಆದಿಕಚ್ಛಪನೇ ಬಾರೋ

ಮೇದಿನೀ ಸುರರೊಡೆಯನೇ ಬಾರೋ

ಪ್ರಹ್ಲಾದನ ಕಾಯ್ದವನೇ ಬಾರೋ || 1 ||


ವಾಮನ ಭಾರ್ಗವನೇ ಬಾರೋ

ರಾಮ ಕೃಷ್ಣನೇ ಬಾರೋ

ಪ್ರೇಮದಿಂ ಬೌದ್ಧನೆ ಬಾರೋ

ಸ್ವಾಮಿ ಕಲ್ಕಿ ನೀ ಬಾರೋ || 2 ||


ಗುರು ಮಧ್ವಪತಿಯೇ ಬಾರೋ

ವರದ ಕೇಶವನೇ ಬಾರೋ

ಪರಮಾತ್ಮ ನೀನೇ ಬಾರೋ

ಶ್ರೀ ಪುರಂದರವಿಟ್ಠಲನೇ ಬಾರೋ || 3 ||

**

Comments