ಗಂಗಾ ತೀರದ ಮನೆ ನಮ್ಮದು purandara dasaru ganga teerada mane nammadu
Restart mobile & try if the above audio is not playing
ಶ್ರೀಪುರಂದರದಾಸರ ಕೃತಿ
ರಾಗ : ಕಾಂಬೋಧಿ ಆದಿತಾಳ
ಸ ಬಿಂದುಮಾಧವಃ ಪಾಯಾದ್ವಿಭೋರ್ಯಸ್ಯ ನಿರೀಕ್ಷಣಾತ್ ।
ಅಪಾರೋsಪಿಹಿ ಸಂಸಾರಸಿಂಧುರ್ಬಿಂದುತ್ವಮಶ್ನುತೇ ॥
(ಸಮರ್ಥನಾದ ಯಾರ ನೋಟದಿಂದ ಸಂಸಾರ ಸಮುದ್ರವು ಪಾರವಿಲ್ಲದ್ದಾದರೂ , ಬಿಂದು ಮಾತ್ರ ಪರಿಮಾಣವನ್ನು ಹೊಂದುವುದೋ , ಆ ಬಿಂದುಮಾಧವನೆಂಬ ಶ್ರೀ ಹರಿಯು ನಮ್ಮನ್ನು ಪಾಲಿಸಲಿ🙏)
ಗಂಗಾ ತೀರದ ಮನೆ ನಮ್ಮದು, ಕಾಶಿ
ಬಿಂದುಮಾಧವನಲ್ಲಿ ಇರುವುದು ಮನೆ ಪಂಚಾ ||ಪ ||
ಆವಾವ ಕಾಲದ ಆನಂದರಮನೆ
ತಾವರೆ ತಳಿತದ ನದಿಯ ಮನೆ
ಆವಾಗ ಕಮಲಜ ಅವತರಿಸಿದ ಮನೆ
ಆ ವೇದಂಗಳಿಗೆಲ್ಲ ತೌರುಮನೆ ಪಂಚ ॥೧॥
ಧ್ವಜವಜ್ರಾಂಕುಶರೇಖಾ ಶಂಖಚಕ್ರದ ಮನೆ
ನಿಜಸುವರ್ಣರೇಖಾ ತೋರುವ ಮನೆ
ಗಜರಾಜಗೊಲಿದಂಥ ಗರುಡ ವಾಹನನಾದ ಇಂಥಾ ಮೂ-
ರ್ಜಗ ತ್ರೈಲೋಕ್ಯ ಮಾಡಿದ ಮನೆ ಪಂಚ ॥೨॥
ಪರಮಪವಿತ್ರ ಚರಿತ್ರ ತೀರ್ಥರ ಮನೆ
ಪರಬ್ರಹ್ಮ ರಥಕೆ ಸಾಧನದ ಮನೆ
ಪರಮಾತ್ಮನಾಗಿ ಇಷ್ಟಾರ್ಥವನೀವ ಶ್ರೀ
ವರನಾದ ಪುರಂದರವಿಠಲನ ಮನೆ ಪಂಚಾ ॥೩॥
**
upto 1st para only
**

Comments
Post a Comment