ಜಯ ಮಂಗಳಂ ನಿತ್ಯ ಶುಭ ಮಂಗಳಂ ಸಚ್ಚಿದಾನಂದ purandara dasaru jaya mangalam nitya shubha mangalam schchidananda
Restart mobile & try if the above audio is not playing
ಶ್ರೀ ಶ್ರೀಪುರಂದರದಾಸಾರ್ಯ ವಿರಚಿತ ಮಂಗಳಾಚರಣೆಯ ಪದ್ಯಗಳು - ೨
ರಾಗ : ಮಧ್ಯಮಾವತಿ ತಿಶ್ರನಡೆ
ಜಯ ಮಂಗಳಂ ನಿತ್ಯ ಶುಭ ಮಂಗಳಂ॥ಪ॥
ಸಚ್ಚಿದಾನಂದ ಸರ್ವಗುಣಪೂರ್ಣಗೆ
ಅತ್ಯಂತ ಸುಜ್ಞಾನಗಬ್ಜಾಕ್ಷಗೆ
ಮೆಚ್ಚಿ ಗೋಪಿಯರೊಡನೆ ಮನವಿಟ್ಟು ಕೂಡಿದಗೆ
ನಿತ್ಯ ಕಲ್ಯಾಣ ನಿರ್ದೋಷಗೆ ॥೧॥
ವ್ಯಾಸಾವತಾರಗೆ ವೇದಉದ್ಧಾರಗೆ
ಸಾಸಿರಾ ನಾಮದಾ ಸರ್ವೇಶಗೆ
ವಾಸವಾಗಿದ್ದ ಶ್ರೀವೈಕುಂಠನಿಲಯಗೆ
ಶೇಷಗಿರಿವಾಸ ವೇಂಕಟರಾಯಗೆ ॥೨॥
ಅಂಬರೀಷನ ಶಾಪ ಪರಿಹರಿಸಿದವನಿಗೆ
ತುಂಬುರು ನಾರದ ಮುನಿವಂದ್ಯಗೆ
ಅಂಬುಜನಾಭಗೆ ಅಜನ ಪೆತ್ತವನಿಗೆ
ಕಂಬುಕಂಧರ ಪುರಂದರವಿಠಲರಾಯಗೆ ॥೩॥
ಜಯ ಮಂಗಳಂ ನಿತ್ಯ ಶುಭ ಮಂಗಳಂ॥
**

Comments
Post a Comment