ಜಯ ಮಂಗಳಂ ನಿತ್ಯ ಶುಭ ಮಂಗಳಂ ಮಂಗಳವು ಮಧುಕೈಟ purandara dasaru jaya mangalam nitya shubha mangalam mangalavu madhukaita
Restart mobile & try if the above audio is not playing
ಶ್ರೀ ಶ್ರೀಪುರಂದರದಾಸಾರ್ಯ ವಿರಚಿತ ಮಂಗಳಾಚರಣೆಯ ಪದ್ಯಗಳು - ೧
ರಾಗ : ಮುಖಾರಿ ತಿಶ್ರನಡೆ
ಜಯ ಮಂಗಳಂ ನಿತ್ಯ ಶುಭ ಮಂಗಳಂ ॥ಪ॥
ಮಂಗಳವು ಮಧುಕೈಟಭಾಸುರಮರ್ದನನಿಗೆ
ಮಂಗಳವು ಮದನಕೋಟಿಕಾಂತಗೆ
ಮಂಗಳವು ಕರುಣಾಂತರಂಗ ಶ್ರೀರಂಗಗೆ
ಮಂಗಳವು ಸಿಂಹಾದ್ರಿ ನರಸಿಂಹಗೆ ॥೧॥
ಶ್ರೀವತ್ಸಲಾಂಛನಗೆ ಸಿರಿದೇವಿಯರಸನಿಗೆ
ಗೋವರ್ಧನೋದ್ಧಾರ ಗೋವಿಂದಗೆ
ಮಾವ ಕಂಸನ ಕೊಂದ ಮಕರಕುಂಡಲಧರಗೆ
ಭಾವಜನಯ್ಯ ಚಿನ್ಮಯಮೂರ್ತಿಗೆ ॥೨॥
ಅಂಬುಜನಾಭನಿಗೆ ಅಖಿಲ ದೇವೇಶಗೆ
ಶಂಬರಾರಿಯಜಾಮಿಳವಂದ್ಯನಿಗೆ
ಎಂಭತ್ತುನಾಲ್ಕು ಲಕ್ಷದ ಜೀವರಾಶಿಗಳ
ಬೊಂಬೆಗಳ ಮಾಡಿ ಕುಣಿಸುವ ದೇವಗೆ ॥೩॥
ಸಕಲ ಗುಣಪೂರ್ಣಗೆ ಸರ್ವಸ್ವತಂತ್ರಗೆ
ಅಕಳಂಕ ಆದಿನಿರ್ದೋಷ ಹರಿಗೆ
ಭಕುತವತ್ಸಲನಿಗೆ ಭವರೋಗ ಹಾರಿಗೆ
ಸಕಲಜೀವದಯಾಪರಮೂರ್ತಿಗೆ ॥೪॥
ಪನ್ನಗಶಯನನಿಗೆ ಪಾವನ್ನಚರಿತಗೆ
ಸನ್ನುತಾನಂತ ಸದ್ಗುಣಪೂರ್ಣಗೆ
ಎನ್ನೊಡೆಯ ಪುರಂದರವಿಠಲರಾಯನಿಗೆ
ತನ್ನ ನಂಬಿದವರ ಸಲಹುವವಗೆ ॥೫॥
ಜಯ ಮಂಗಳಂ ನಿತ್ಯಶುಭ ಮಂಗಳಂ॥
**

Comments
Post a Comment