ಅಂಜಬೇಡ ಬೇಡವೆಲೆ ಜೀವ purandara dasaru anjabeda bedavele jiva


Restart mobile & try if the above audio is not playing


ಶ್ರೀ ಶ್ರೀಪುರಂದರದಾಸರ ಕೃತಿ

ರಾಗ : ಅಭೋಗಿ   ಆದಿತಾಳ


ಅಂಜಬೇಡ ಬೇಡವೆಲೆ ಜೀವ l 

ಭವ ಭಂಜನ ಹರಿ ಶರಣರ ಕಾವ  ll


ಬಂದಷ್ಟರಿಂದಲಿ ಬಾಳಿಕೊ l 

ಬಲು ಸಂದೇಹಬಂದಲ್ಲಿ ಕೇಳಿಕೊ | 

ನಿಂದಾ – ಸ್ತುತಿಗಳನು ತಾಳಿಕೊ l 

ಗೋವಿಂದ ನಿನ್ನವನೆಂದು ಹೇಳಿಕೊ ll  ೧ ll 


ಮಾಧವನಿಗೆ ತನುಮನ ಮೆಚ್ಚು l 

ಕಾಮ ಕ್ರೋಧಾದಿಗಳ ಕಲಿಮಲ ಕೊಚ್ಚು | 

ಮೋದತೀರ್ಥವಚನವೆ ಹೆಚ್ಚು l 

ಮಾಯಾ ವಾದಿ ಮತಕೆ ಬೆಂಕಿಯ ಹಚ್ಚು ll  ೨ ll


ಪರವನಿತೆಯರಾಶೆಯ ಬಿಡು  l  

ನೀ ಹರಿಸರ್ವೋತ್ತಮ ನೆಂದು ಕೊಂಡಾಡು | 

ಪರಮಾತ್ಮನ ಧ್ಯಾನವ ಮಾಡು  l 

ನಮ್ಮ ಸಿರಿ ಪುರಂದರವಿಠಲನ ನೀ ನೋಡು  ll ೩ ll

**

Comments