ನೀನೆ ಅಚ್ಯುತ ನೀನೆ ಮಾಧವ purandara dasaru neene achyuta neene madhava
Restart mobile & try if the above audio is not playing
Purandara dasaru
ರಾಗ - ವಸಂತ ತಾಳ - ಅದಿತಾಳ
ನೀನೆ ಅಚ್ಯುತ ನೀನೆ ಮಾಧವ l
ಹರಿಗೋವಿಂದನು ನೀನೆ ll
ನೀನೆಗತಿಯೆಂದು ನಂಬಿದ ದಾಸಗೆ l
ಅಭಯ ಕೊಟ್ಟಾತನು ನೀನೆ ll ಪ ll
ಜಲದೊಳು ಪೊಕ್ಕು ಮೈನಡುಗಿಸಿ ಭಾರವ l
ತಳೆದಾತನು ನೀನೆ ll
ಇಳೆಯ ಕದ್ದಸುರನ ದಾಡೆಯಿಂದ ಸೀಳಿ ಕಂಬ l
ದೊಳು ಉದ್ಭವಿಸಿದೆ ನೀನೆ ll ೧ ll
ಬಲಿಯ ಪಾತಾಳಕೆ ತುಳಿದೆಯೊ ನೀನು ಕೊ l
ಡಲಿಯ ಪಿಡಿದವನು ನೀನೆ ll
ಜಲಧಿಯ ದಾಟಿ ಅಸುರರ ಕಡಿದು l
ಲಲನೆಯ ತಂದಾತ ನೀನೆ ll ೨ ll
ಗೊಲ್ಲರ ಮನೆಯಲಿ ಬೆಣ್ಣೆಯ ಕದ್ದು l
ಕಳ್ಳನೆನಿಸಿದವ ನೀನೆ ll
ಬಲ್ಲಿದ ತ್ರಿಪುರದಿ ಬತ್ತಲೆ ನಿಂತು l
ಒಳ್ಳೆ ಹಯವ ಹತ್ತಿದೆ ನೀನೆ ll ೩ ll
ಪಾಂಡವರಿಗತಿ ಪ್ರಿಯನೆಂದೆನಿಸಿದ l
ಪುಂಡರೀಕಾಕ್ಷನು ನೀನೆ ll
ಪುಂಡಲೀಕ ಪುರುಷೋತ್ತಮ ಮೂರುತಿ l
ಪುರಂದರವಿಟ್ಠಲನು ನೀನೆ ll ೪ ll
^^^

Comments
Post a Comment