ಕರೆವರೆಲ್ಲರೂ ಕೂಗಿ ಕರಿಗೊರಳ ನಿನಗೆ ಬಾಗಿ prasannavenkata dasaru karavarellaru kugi karigorala ninage bagi

 


Restart mobile & try if the above audio is not playing


ಶ್ರೀಶ್ರೀ ಪ್ರಸನ್ನವೆಂಕಟ ದಾಸರ ಕೃತಿ 

ರಾಗ : ನಾಟ ದಿತಾಳ 


ಕರೆವರೆಲ್ಲರೂ ಕೂಗಿ ಕರಿಗೊರಳ ನಿನಗೆ ಬಾಗಿ IIಪII


ಬರಬೇಕೊ ಶ್ರೀಹರಿಯ ಚರಿತೆ ಅರುಹಲು ಮನಿಗಿ llಅ.ಪll


ರಾಮನಾಮದ ಅಮಲು ಭೂಮಿಪರಿಗೇರಿಸಿ

ನೇಮನಿತ್ಯವ ತಿಳಿಸಿದ 

ಅಮರಾದಿ ಸುರವಂದ್ಯ

ಭಾಮೆ ಉಮೆಗತಿ ಪ್ರೇಮದಲಿ ಹರಿ ಮಹಿಮೆ

ಧುಮ್ಮಗೈಸಿದೆ ಉಮ್ಮಳದ ಭಾವ ಕುಸುಮಪಲ್ಲವಿಸಿ

II1II


ಮೂಲೋಕ ಪಾವನ ಜಲವ ತಲೆಯಲ್ಲಿ

ತಿಲಕ ಫಣಿ ಫಾಲ ಚಂದ್ರನಿಹನಲ್ಲಿ

ನೀಲಗ್ರೀವ ಕಪಾಲ ಪಿಡಿದು ಕರದಲಿ

ನಿಲ್ಲದಲೆಯುತ ರಾಮ ಜಪ ಮಾಳ್ಪ ತ್ರಿಶೂಲಿ ll2ll


ಉತ್ತರೆಯ ಕುವರನಿಗೆ ಉತ್ತರೋತ್ತರ ಮುಕುತಿ | 

ಪಥವ ತೋರಿದ ಪ್ರಮತ ಮುನಿ ಮಹಾದೇವನೆ

ಚಿತ್ತದೊಲ್ಲಭ ನಮ್ಮ ಸಿರಿ ಪ್ರಸನ್ವೆಂಕಟನ 

ಚಿತ್ತ ನಮ್ಮತ್ತ ಹರಿವಂತೆ ಕೃಪೆದೋರಲು ll3ll

**

Comments