ವತ್ಸಲೆ ವಂದಿಪೆ ವರಮಹಾಲಕುಮಿ prasannavenkata dasaru vatsale vandipe varamhalakumi

Restart mobile & try if the above audio is not playing

ಶ್ರೀ ಶ್ರೀಪ್ರಸನ್ನವೆಂಕಟದಾಸಾರ್ಯ ವಿರಚಿತ 

ಶ್ರೀಲಕ್ಷ್ಮೀದೇವಿಯ ಸ್ತುತಿಪದ

ರಾಗ : ಭೀಮ್ ಪಲಾಸ್  ಆದಿತಾಳ


(ಭಾರತದ 5 ಪವಿತ್ರ ಸರೋವರಗಳಲ್ಲಿ ಒಂದಾದ ಆನೆಗೊಂದಿಯ ಪಂಪಾಸರೋವರದ ತಟದಲ್ಲಿ ಪ್ರಾಚೀನವಾದ ಶ್ರೀಲಕ್ಷ್ಮೀದೇವಿಯ ದೇವಸ್ಥಾನವಿದೆ. ಇದು ಪುರಂದರದಾಸರು  ಆರಾಧಿಸುತ್ತಿದ್ದ ಲಕ್ಷ್ಮೀದೇವಿಯ ಕ್ಷೇತ್ರ, ದಾಸರು ಇಲ್ಲಿಗೆ ಬಂದಾಗ ಈ ಕ್ಷೇತ್ರದ ಮಹಿಮೆಯನ್ನು ಕುರಿತು. ಈ ಕ್ಷೇತ್ರದ ಲಕ್ಷ್ಮೀದೇವಿಯನ್ನು ಸ್ತುತಿಸಿ ಈ ಕೀರ್ತನೆ ರಚಿಸದ್ದಾರೆಂದು ಕಂಡುಬರುತ್ತದೆ.)


ವತ್ಸಲೆ ವಂದಿಪೆ ವರಮಹಾಲಕುಮಿ ॥ಪ॥


ವತ್ಸ ನಿನ್ನವನೆಂದು ಭಕ್ತವತ್ಸಲ ಹರಿಯಾ | 

ಚಿತ್ಸುಖ ಕರುಣಿಸು ತಾತ್ಸಾರ ಮಾಡದೆ॥ಅ.ಪ॥


ಶ್ರವಣವೇ ಸಕಲಾದಿ ನವವಿಧ ಭಕುತಿಯ | 

ನವನೀತದಂತೆ ನೀನಿತ್ತು ಭವಜರಿಗೆ || 

ಭಾವಜನಯ್ಯನ ಭವಾವಿಭವ ತವ | 

ಠಾವನರಿತು ಸದಾ ಸೇವೆಗೈಯ್ಯುವಾ॥೧॥


ಮಾಲೋಲೆ ಮಹಾಪ್ರಳಯಕಾಲದೆ | 

ಆಲದೆಲೆಯಾಗಿ ನೀರಲ್ಲಿ ತೇಲಿದೆ | 

ಪಾಲ್ಗಡಲಲುದಿಸಿ ಹರಿಯ ವಲಿಸಿ | 

ನಲಿದೆ ಸಕಲಕೆ ಸೌಭಾಗ್ಯಳೆನಿಸಿ ॥೨॥


ಗಜಗಂವ್ಹರೆ ಅಜಮನಸಿಜ ಜನನಿ । 

ಪೂಜ್ಯ ಪುರಂದರ ದಾಸರ ಕರುಣಿ ॥

 ಗಜವರದ ಗಂಭೀರ ಅಹಿರಾಜಶಯನ 

ಭೂಭುಜಃ ಪ್ರಸನ್ವೆಂಕಟನ ನಿಜ ರಾಣಿ ॥೩॥

**

Comments