ಎಂದಿಗಾದರೊಮ್ಮೆ ವೃಂದಾವನದಿಂದ prasannavenkata dasaru endigadaromme vrundavanadinda

Restart mobile & try if the above audio is not playing

ಶ್ರೀ ಶ್ರೀಪ್ರಸನ್ನವೆಂಕಟದಾಸರ ಕೃತಿ

ರಾಗ : ಖಮಾಚ್    ಆದಿತಾಳ


ಎಂದಿಗಾದರೊಮ್ಮೆ ವೃಂದಾವನದಿಂದ 

ಬಂದು ಈ ಕಂದನನು ಕೂಗಲಾರೆಯ ಗುರುವೆ ॥ಪ॥


ಮಂದರೋದ್ಧರನ ಮಹಾ ಮಂದಿರವ ತಂದಿಳಿಸಿ 

ಚೆಂದ ಮುಕುತಿ ಜ್ಞಾನದಾನಂದವನೀಡಿ

॥ಅ.ಪ॥


ಅಪ್ರಮೇಯನೆ ನೀನು ಅಪರೂಪದಲಿ 

ಅಂದು ಅಪ್ಪಣ್ಣಾಚಾರ್ಯರಿಗೆ ಪ್ರಕಟಗೊಂಡು 

ಸ್ವಪದವಲಂಬಿತರ ಪೊರೆವ ಗುರು ನೀ ಎಂಬ 

ಸುಪ್ರಸಿದ್ಧಿಯ ಕೇಳಿ ಒಪ್ಪಿಸಿ ಬಂದಿರುವೆ ॥೧॥


ಆಶನವಸನಗಳಾಶೆ ಹುಸಿಮಾತನಾಡಿಸಿ ಘಾಸಿಗೊಳಿಸಿದೆ 

ಎನ್ನ ಮನಕೆ ಮುಸುಕ್ಹಾಕಿ ಮೋಸಹೋದೆ

ಗುರುವೆ ಭವಪಾಶದಲಿ ಸಿಲುಕಿ 

ಆಸರೆಯ ನೀಡು ಬಾ ಹರಿದಾಸನೆನಿಸಿ ॥೨॥


ಧನಕನಕಗಳ ಬಯಸಿ ನಿನ್ನ ಕರೆಯುವನಲ್ಲ 

ನಿನ್ನವರ ಮನೆಯಲ್ಲಿ ಕುನ್ನಿಯಾಗಿರಿಸೆನ್ನ 

ಮನೋಜನಿತಜನಕ ಶ್ರೀ ಪ್ರಸನ್ವೆಂಕಟನೊಲುಮೆ 

ಸನ್ನುತವು ಕೊಡಿಸೆನ್ನ ಅನುಗ್ರಹಿಸು ಬಾ ತಂದೆ ॥೩॥

**

Comments