ಆರುತಿ ಬೆಳಗುವೆನು ಮಾಧವಗಾರುತಿ pandurangi huchchacharyaru

 


Restart mobile & try if the above audio is not playing

ತಿರುಪತಿ ಪಾಂಡುರಂಗಿ ಹುಚ್ಚಚಾರ್ಯರ ರಚನೆ 


ರಾಗ : ಬೆಹಾಗ್   ಏಕತಾಳ 


ಆರುತಿ ಬೆಳಗುವೆನು ಮಾಧವಗಾರುತಿ ಬೆಳಗುವೆನು llಪll


ಆರುತಿ ಬೆಳಗುವೆ ಮಾರುತಿ ಪ್ರಿಯ ಯದು-

ಕೀರುತಿಕರ ಪಾರ್ಥಸಾರಥಿ ಹರಿಗೆ   llಅ.ಪ.ll


ನೀರೊಳು ಪೊಕ್ಕವಗೆ ಕಡಲೊಳು ಭಾರವ ಪೊತ್ತವಗೆ

ಮೂರು ಪಾದದಿ ಸರ್ವಧಾರುಣಿ ಅಳೆಯುತ

ಧೀರ ಬಲಿಯ ಮನೆ ದ್ವಾರ ಕಾಯ್ದವಗೆ ll1ll


ಕ್ಷತ್ರಿಯರ ಗೆಲಿದವಗೆ 

ಗಾರ್ಜಿತ ಸತ್ರವ ಕಾಯ್ದವಗೆ

ಸತ್ಯ ರುಕ್ಮಿಣಿ ಮುಖ್ಯ ಪತ್ನಿಯರಾಳಿದ

ಬತ್ತಲೆ ಕುದುರಿಯ ಹತ್ತಿ ಮೆರೆದವಗೆ ll2ll


ಸೃಷ್ಟಿಯು ಇಲ್ಲದವಗೆ 

ಜಗವನು ಸೃಷ್ಟಿ ಪಾಲಿಪಗೆ

ಬೆಟ್ಟಿಲಿಂದಲೇ ಗಿರಿ ಬೆಟ್ಟನೆತ್ತಿ

ಅಭೀಷ್ಟ ನೀಡಲು ಸುಖ ಪುಷ್ಪವಂದಿತಗೆ ll3ll


ನಂದಗೋಕುಲದಲ್ಲೆ ಬೆಳೆಯುವ ಮಂದಜಾಕ್ಷಿಯರಲ್ಲೆ

ಒಂದೊಂದು ಆಟಗಳಾಡಿ ಸುಖವನಿತ್ತ

ನಂದ ಬಾಲಕನಾದ ಇಂದಿರೇಶನಿಗೆ ll4ll

**

Comments