ಪಾರ್ವತೀ ಪತಿಯೇ ಎನ್ನ ಪಾಲಿಸುವುದು muddumohana dasaru parvati patiye enna palisuvudu


Restart mobile & try if the above audio is not playing


ಶ್ರೀ ಮುದ್ದು ಮೋಹನದಾಸರ ಕೃತಿ

ರಾಗ : ಶ್ರೀರಂಜನಿ     ಅದಿತಾಳ


ಪಾರ್ವತೀ ಪತಿಯೇ ಎನ್ನ ಪಾಲಿಸುವುದು || ಪ||

 

ದೂರು ನೋಡದೇ ಗುರುವ ಸಾರುವುದು ಸತತಾ || ಅ. ಪ || 


ಭಜಕರ ಸರ್ವಕಾವನ ನಿಜ ದಾಸರೊಳ್ ಕೂಡಿಸಿ 

ಭಜನೆಯ ಮಾಡಿಸೋ ಬೇಗ ಭುಜಗ ಭೂಷಣನೆ ನೀನು

ನಂದಿವಾಹನನೆ ಎನ್ನಾ ಮಂದಮತಿಗಳ ಹರಿಸಿ 

ಕಂದುಗೊರಳನೆ ನೀನು ಆನಂದದಿಂದಲಿ ಕಾಯೋ || 1 || 


ಭೂತನಾಥನೆ ನೀನು ಮಾತನು ಲಾಲಿಸುವುದು

ದಾತಾನೆ ಸಲಹೋ ಎನ್ನಾ ಪಾತಕವನು ಹರಿಸಿ

ಶುದ್ಧ ಭಕುತಿಯನು ಕೊಟ್ಟು ಸದ್ವೈಷ್ಣವರ ಪ್ರೀಯನೆ

ಮಧ್ವಾಂತರ್ಗತ ಮುದ್ದು-ಮೋಹನವಿಠ್ಠಲನ್ನ ತೋರೋ ||2II

** 

Comments