ಮಾರುತ ಒಲಿದವಗೆ ಮಾರಮಣನು ಒಲಿವಾ mohana dasaru maruta olidavage maramananu
Restart mobile & try if the above audio is not playing
ಶ್ರೀ ಶ್ರೀಮೋಹನದಾಸರ ಕೃತಿ
ರಾಗ : ಮಲಯಮಾರುತ ಆದಿತಾಳ
ಮಾರುತ ಒಲಿದವಗೆ ಮಾರಮಣನು ಒಲಿವಾ ॥ಪ॥
ಭಾರತೀರಮಣ ಮುನಿಯೆ ಭವಹರ ಹರಿ ಮುನಿವ॥ಅ.ಪ॥
ಸುಗ್ರೀವನು ಬಂದು ಹನುಮನ್ನ ಅನುಸರಿಸೆ
ಶೀಘ್ರದಿಂದ ಹರಿ ವಾಲಿಯ ಕೊಂದನು ||
ವಿಗ್ರಹದೊಳಗೆ ಕರ್ಣನ ಗೆದ್ದ ಅರ್ಜುನನು
ಅಗ್ರಜ ಹರಿಕೃಪೆ ಇದ್ದ ಕಾರಣದಿಂದ
॥೧॥
ಹನುಮಗೆ ಹರಿ ಒಲಿಯಲು ರಾವಣನ
ಒಂದು
ಕ್ಷಣದೊಳಗೆ ಹರಿ ಖಂಡ್ರಿಸಿದನು
ಅನುಮಾನವಿಲ್ಲದೆ ಅವನನುಜ ವಿಭೀಷಣಗೆ
ಘನ ಪದವಿಯನಿತ್ತ ಸನಕಾದಿ ವಂದ್ಯಾ॥2॥
ತುಂಗಭದ್ರೆಯವಾಸ ಶೃಂಗಾರ ಗುಣನಿಧಿ
ಹಿಂಗದೆ ಭಜಕರ ಪೊರೆವ ದಾತ ಮಂಗಳಮೂರುತಿ ಮೋಹನ್ನವಿಠ್ಠಲ
ರಂಗನ್ನ ಪದಕಮಲ ಭೃಂಗನೆಂದೆನಿಸುವ ॥3॥
**

Comments
Post a Comment