ದುರ್ಗೇ ಪಾಲಿಸೆ ಹೇ ದುರ್ಗೇ ಪಾಲಿಸೆ karpara narahari dasaru durge palise he durge
Restart mobile & try if the above audio is not playing
ಶ್ರೀ ಕಾರ್ಪರ ನರಹರಿದಾಸರ ಕೃತಿ
ರಾಗ : ದುರ್ಗಾ ಆದಿತಾಳ
ದುರ್ಗೇ ಪಾಲಿಸೆ ಹೇ ದುರ್ಗೇ ಪಾಲಿಸೆ ॥ಪ॥
ಭಾರ್ಗವಿ ಭಜಕರ ವರ್ಗವ ಕರುಣದಿ ॥ಅ.ಪ॥
ಸರ್ಗಸ್ಥಿತಿ ಲಯಕಾರಣೆ ಜಗಕೆ ಸು
ಮಾರ್ಗದಿ ನಡೆಯಲನುಗ್ರಹ ಮಾಡೆ ॥೧॥
ವಂದಿಸುವೆನು ಭವಬಂಧವ ಬಿಡಿಸ್ಯಾ
ನಂದವ ಕರುಣಿಸು ನಂದಾತ್ಮಜಳೆ ॥೨॥
ಕಡಲತನುಜೆ ತವಕಡು ಕರುಣದಲಿ
ಬಡಜಭವ ಮುಖರು ಪಡೆದರು ಪದವನು ॥೩॥
ಧಾರುಣೆ ನಭ ಸಂಚಾರಿಣೆ ಆಯುಧ
ಧಾರಿಣಿ ಭವ ಭಯಹಾರಿಣಿ ನಮೊನಮೋ॥೪॥
ಇಂದಿರೆ ಪದುಮ ಸುಮಂದಿರೆ ತವಪದ
ದ್ವಂದ್ವದಿ ಭಕುತಿಯ ಪೊಂದಿ ಸುಖಿಸುವಂತೆ ॥೫॥
ವೀರರೂಪಿ ಅಸುರಾರಿಯೆ ತವಪರಿ
ವಾರದ ಭಯವನು ತಾರದಿರೆಂದಿಗೂ ॥೬॥
ಮಂಗಳಕೃಷ್ಣ ತರಂಗಿಣೆ ಕಾರ್ಪರ
ತುಂಗಮಹಿಮೆ ನರಸಿಂಗನ ರಾಣಿ ॥೭॥
**

Comments
Post a Comment