ಗೋವಿಂದ ಹರಿ ಗೋವಿಂದ kanaka dasaru govinda hari govinda
Restart mobile & try if the above audio is not playing
ಶ್ರೀ ಶ್ರೀಕನಕದಾಸರ ಕೃತಿ
ರಾಗ : ಬೃಂದಾವನಸಾರಂಗ ಏಕತಾಳ
ಗೋವಿಂದ ಹರಿ ಗೋವಿಂದ ಕೇಶವ ಕೃಷ್ಣ ಜನಾರ್ದನ ॥ಪ॥
ಮತ್ಸ್ಯಾವತಾರದೊಳ್ ಆಡಿದನೆ
ಮಂದರಾಚಲ ಬೆನ್ನೊಳು ತಾಳಿದನೆ
ಅಚ್ಚ ಸೂಕರನಾಗಿ ಬಾಳಿದನೆ
ಮದ ಹೆಚ್ಚೆ ಹಿರಣ್ಯಕನ ಸೀಳಿದನೆ ||೧||
ಕುಂಬಿನಿ ದಾನವ ಬೇಡಿದನೆ
ಕ್ಷಾತ್ರರೆಂಬುವರನು ಹತ ಮಾಡಿದನೆ
ಅಂಬುದಿಗೆ ಶರ ಹೂಡಿದನೆ
ಕಮಲಾಂಬಕ ಗೊಲ್ಲರೊಳಾಡಿದನೇ || ೨ ||
ವಸುದೇವನುದರದಿ ಪುಟ್ಟಿದನೆ
ಪೊಲ್ಮೆಸೆವ ಧನುಜರೊಡಗುಟ್ಟಿದನೆ
ಎಸವ ಕಾಳಿಂಗನ ಮೆಟ್ಟಿದನೆ
ಭಾದಿಸುವರ ಯಮಪುರ ಕಟ್ಟಿದನೆ || ೩ ||
ಪೂತನಿಯ ಮೈಯ ಸೋಕಿದನೆ ಮಹಾ
ಘಾತದ ಮೊಲೆಯುಂಡು ತೇಗಿದನೆ
ಘಾತಕಿಯನತ್ತಾ ನೂಕಿದನೆ ಗೋಪ -
ವ್ರಾತ ಗೋಗಳನೆಲ್ಲಾ ಸಾಕಿದನೆ ||೪||
ಸಾಧಿಸಿ ತ್ರಿಪುರರ ಗೆಲಿದವನೇ
ಲೇಚರ ಭೇದಿಸಿ ಹಯವೇರಿ ಮೆರೆದವನೇ
ಸಾಧಿಸಿ ಸಕಲವ ತಿಳಿದವನೇ
ಬಾಡದಾದಿಕೇಶವ ಭಕ್ತಿಗೊಲಿದವನೇ || ೫ ||
**

Comments
Post a Comment