ಈ ಸಿರಿಯ ನಂಬಿ ಹಿಗ್ಗಲು ಬೇಡ ಮನವೆ kanaka dasaru ee siriya nambi higgalu beda
Restart mobile & try if the above audio is not playing
ಶ್ರೀ ಶ್ರೀಕನಕದಾಸರ ಕೃತಿ
ರಾಗ : ಚಕ್ರವಾಕ ಖಂಡಛಾಪುತಾಳ
(ಸಂಪತ್ತು ಕೇಂದ್ರೀಕೃತಗೊಳ್ಳಬಾರದು)
ಈ ಸಿರಿಯ ನಂಬಿ ಹಿಗ್ಗಲು ಬೇಡ ಮನವೆ ॥ಪ॥
ವಾಸುದೇವನ ಭಜಿಸೊ ಒರಟು ಜೀವನವೆ ॥ಅ.ಪ॥
ನೆಂಟರೂರಿಗೆ ಹೋಗಿ ನಾಲ್ಕು ದಿವಸವಿದ್ದರೆ
ಎಂಟು ದಿನದಾಯಾಸ ಅಟ್ಟಬಹುದೊ
ಉಂಟು ಸೌಭಾಗ್ಯವೆಂಬ ಧೈರ್ಯವ ಬಿಟ್ಟು
ವೈ-ಕುಂಠವಾಸಿಯ ಭಜಿಸೊ ತುಂಟ ಜೀವನವೆ ॥೧॥
ಮಡದಿ ಮಕ್ಕಳು ಎಂಬ ಮಾಯಾ ಸಂಸಾರಕ್ಕೆ
ಸಡಗರವಗೊಂಡು ಬರಿದೆ ಭ್ರಮಿಸಲೇಕೆ
ಬಿಡದೆ ಯಮನಾಳುಗಳು ಬಾರೆಂದು ಎಳೆವಾಗ
ಮಡದಿ ಮಕ್ಕಳು ಬಹರೆ ಭಂಡ ಜೀವನವೆ ॥೨॥
ಇಷ್ಟ ಸಂಪತ್ತನ್ನು ಬಡವರಾ ಕರೆತಂದು
ಕೊಟ್ಟು ಮಾಡಿದ ಪುಣ್ಯಫಲ ತನ್ನದೊ
ಸೃಷ್ಟಿಯೊಳು ಕಾಗಿನೆಲೆಯಾದಿಕೇಶವನಂಘ್ರಿ
ಮುಟ್ಟಿ ಮನದಲಿ ಭಜಿಸೊ ಭ್ರಷ್ಟಜೀವನವೆ ॥೩॥
**

Comments
Post a Comment