ಸಂಸಾರವನು ಮಾಡಿ ಸಕಲ ಜನರೂ kalluru subbanna dasaru samsaravanu madi sakala janaru
ಶ್ರೀ ಕಲ್ಲೂರು ಸುಬ್ಬಣ್ಣ ದಾಸರ ಕೃತಿ
ರಾಗ : ರೇವತಿ ಖಂಡಛಾಪು
ಸಂಸಾರವನು ಮಾಡಿ ಸಕಲ ಜನರೂ llಪll
ಕಂಸಾರಿ ಶ್ರೀಕೃಷ್ಣ ಕೈಪಿಡಿದು ಸಲಹುವನು
llಅ.ಪ.ll
ಬುದ್ಧಿಯೆಂದೆಂಬ ಕನ್ನಿಕೆಯ ಮದುವೆಯ ಮಾಡಿ
ಸದ್ಧರ್ಮದಭಿಮಾನದಿಂದ ಬೆಳಸೀ
ಶುದ್ಧ ಭಕ್ತಿಗಳೆಂಬ ಮಕ್ಕಳನು ಪಡೆದು ಬಹು
ಅದ್ಭುತ ಭವಾಬ್ಧಿಯನು ದಾಟಿರಯ್ಯಾ ll1ll
ಚಾರು ಸುಜ್ಞಾನವೆಂಬುವ ಮುದ್ದು ಮಗನ್ಹಡೆದು
ವೈರಾಗ್ಯವೆಂಬ ಭಾಗ್ಯವನೆ ಬೇಡೀ
ಸಾರ ಹರಿನಾಮಗಳ ರಸ ಪದಾರ್ಥಗಳುಣಿಸಿ
ಕಾರುಣ್ಯದಲಿ ಬೆಳೆಸಿರಯ್ಯ ಮಕ್ಕಳನು ll2ll
ಯಮ ನಿಯಮ ಅಷ್ಟಾಂಗ ಅಣಿಮಾದಿಗಳು
ಕ್ಷಮದಮಾದಿಗಳೆಂಬ ಬಂಧು ಬಳಗಾ
ಮಮತೆ ಪೆರ್ಚಿಸಿಕೊಂಡು ಬೀಗತನ ಮೊದಲಾದ
ಅಮರಿಕೆಯ ಸಂಬಂಧವನೆ ಮಾಡಿರಯ್ಯಾll3ll
ಶೀಲ ಸನಕಾದಿಗಳು ಮುನಿ ದೇವತಾದಿಗಳು
ತಾಳಿ ತಮ್ಮೊಳಗೆ ಸಮ ವಿಷಯರಾಗಿ |ಆಲಂಪಟಗಳ್ಹಚ್ಚಿಕೊಂಡು ಭವನಿಧಿ ದಾಟಿ
ಸಾಲೋಕ್ಯ ಮೊದಲಾದ ಮುಕ್ತಿಗೈದಿದರೂ ll4ll
ಹೊರಗಿದ್ದ ಪದವಿ ಸತಿ ಸುತರು ಭಾಗ್ಯವೆ ನಿಮಗೆ
ಹರಿಯಿತ್ತ ಕಾಲಕ್ಕು ಹೃದಯದೊಳಗೇ|ಮರೆಯಲಾಗದು ಹಿಂದೆ ಸಂಸಾರದಾ ಬಾಧೆ ದುರಿತಾರಿ ವ್ಯಾಸ ವಿಠ್ಠಲ ಬ್ಯಾಗ ಒಲಿವಾ ll5ll
**
.jpeg)
Comments
Post a Comment