ನಮಿಸಿ ಬೇಡುವೆ ವರಗಳ ನಿನ್ನ jagannatha dasaru namisi beduve varagala ninna

Restart mobile & try if the above audio is not playing

ಶ್ರೀ ಶ್ರೀಜಗನ್ನಾಥದಾಸರ ಕೃತಿ

ರಾಗ : ಮಧ್ಯಮಾವತಿ  ಆದಿತಾಳ


ನಮಿಸಿ ಬೇಡುವೆ ವರಗಳ ನಿನ್ನ

ಸ೦ಯಮಿ ಕುಲೋತ್ತಮ ರಾಘವೇ೦ದ್ರ ರನ್ನ        || ಪ ||


ವಿಮಲ ಸುಮತಿ ಜನರತಿಪ್ರೀಯಾ – ಪಾದ

ಕಮಲಗಳಿಗೆರಗುವೆನೊ ಜೀಯಾ

ಶಮಲ ಮಾರ್ಗದಲಿ ನೀ ನೀಯದಿರೊ ಮತಿಯ

ಅಮಿತ ಕರುಣದಿ ಪಿಡಿಯೋ ಕೈಯ್ಯ        || ೧ ||


ಕ೦ಡಕ೦ಡವರನು ಬೇಡಿ ನೊ೦ದೆ ಕ

ಮ೦ಡಲು ದ೦ಡಧಾರಿ ನೀ ಗತಿಯೆ೦ದೆ

ಪ೦ಡಿತಾಗ್ರಗಣ್ಯ ಇನ್ಯಾರು ಮು೦ದೆ ಕೋ

ದ೦ಡಪಾಣಿಯ ಪಾದ ತೋರಿಸು ತ೦ದೆ        || ೨ ||


ಶ್ರೀ ಸುಧೀ೦ದ್ರ ಯತಿಕರಕ೦ಜಜಾತ ತು೦

ಗಾಸುನದಿನಿಲಯಾ ಅಘಾ೦ಬುಧಿ ಪೋತ

ವಾಸುಕಿಶಯನ ಜಗನ್ನಾಥ ವಿಠ್ಠಲ

ದಾಸರ ಪೋಷಕ ಲಾಲಿಸಿ ಪೋತಾ        || ೩ ||

**

Comments