ಅನಾದಿಕಾಲದ ಋಣಾನುಬಂಧ honnali venkata dasaru anadikalada runanubandha
Restart mobile & try if the above audio is not playing
ಶ್ರೀವೇoಕಟವಿಠಲಾ0ಕಿತ ಕೃತಿ
ರಾಗ: ದರ್ಬಾರಿ ಕಾನಡ ಖಂಡಛಾಪು
ಅನಾದಿಕಾಲದ ಋಣಾನುಬಂಧ|
ಮನ ನಿನ್ನಲಿ ನಿಲ್ಲಿಸೋ ಮಾಧವ|
ಅನಾದಿ ಕಾಲದಿ ನಿನ್ನ ಅಧೀನನಾಗಿ|
ನೀನು ಕುಣಿಸಿದಂತೆ ನಾನು ಕುಣಿವೆ|
ಹಾನಿ ವೃದ್ಧಿ ಮೊದ ಕ್ಲೇಶಗಳುಂಡೆ|
ದೀನನು ನಾನು ದಯಾಮಯ ನೀನು ll1ll
ಹಿಂದೆ ದ್ರೌಪದಿಯ ಮಾನವ ಕಾಯ್ದೆ|
ಅಂದು ಅಜಾಮಿಳಗೆ ಒಲಿದು ಸದ್ಗತಿಯನಿತ್ತೆ|
ಕಂದ ಧೃವರಾಯ ಪ್ರಲ್ಹಾದಗೊಲಿದೆ|
ತಂದೆ ಕೃಪೆಮಾಡಿ ಬಂಧನ ಬಿಡಿಸೊ ll2ll
ಸಾಧಿಸಿ ಶೋಧಿಸಿ ಬಹಳ ಯತ್ನದಿ|
ಆದರದಿಂದ ಪಾಡಿ ಕುಣಿದೆನಲ್ಲದೆ|
ಮೇದಿನಿಪತಿ ಶ್ರೀವೇoಕಟವಿಠಲ|
ಕಾದುಕೋ ಬಿಡದೆ ನಿನ್ನವರವನೆಂದು ll3ll
**

Comments
Post a Comment