ಗಯ್ಯುವೆನಾರುತಿ ಗರುಡ ವಾಹನಗೆ harapanahalli bheemavva gayyuvenaruti garuda vahanage
Restart mobile & try if the above audio is not playing
ಹರಪ್ಪನಹಳ್ಳಿಭೀಮವ್ವ ವಿರಚಿತ
ಭಗವಂತನಿಗೆ ಸಲ್ಲಿಸುವ ಆರತಿ ಹಾಡು
ರಾಗ : ಕಾಪಿ ತಿಶ್ರನಡೆ
ಗಯ್ಯುವೆನಾರುತಿ ಗರುಡ ವಾಹನಗೆ ಉರಗಶಯನ ಹರಿಗೆ
ಸುರ ದೊರೆಗೆ ಉರಗಶಯನ ಹರಿಗೆ ||ಪ||
ಕಂದ ಧ್ರುವರಾಯಗಾನಂದ ಪದವನಿತ್ತು
ಮಂದರೋದ್ಧರ ಗೋವಿಂದ ಮುಕುಂದಗೆ ||೧||
ದುರುಳ ದೈತ್ಯನ ಕೊಂದು ಕರುಳ ಧರಿಸಿಕೊಂಡು
ತರಳನಿಗೊಲಿದಂಥ ಪರಮ ದಯಾಳೊ ||೨||
ಹತ್ತಾವತಾರದಲೆ ಅಷ್ಟು ದೈತ್ಯರನೆ ಕೊಂದು
ಭಕ್ತರಿಗೊಲಿದ ಭೀಮೇಶ ಕೃಷ್ಣನಿಗೆ ||೩||
**

Comments
Post a Comment