ಆರೋಗಣೆಯ ಮಾಡು ಅಂಬುಜನಯನೇ harapanahalli bheemavva aroganeya madu ambujanayane
Restart mobile & try if the above audio is not playing
ಹರಪ್ಪನಹಳ್ಳಿ ಭೀಮವ್ವನವರ ಕೃತಿ
ಗೌರಿ ನೈವೇದ್ಯದ ಹಾಡು
ರಾಗ : ಶುದ್ಧಸಾವೇರಿ ತಿಶ್ರನಡೆ
ಆರೋಗಣೆಯ ಮಾಡು ಅಂಬುಜನಯನೇ ಸಾಮವೇದಸದನೇ|
ಮಾರಜನನಿಯೇ ಮಧುಸೂದನಪ್ರಿಯೇ ಕಾಮಿತಫಲದಾಯೇ ಗೌರಿಯೇ||
ಶುಭ್ರಸ್ನಾನವ ಮಾಡಿ ಸುಮತಿಯರು ಮುದದಿಂದ
ಶುಭ್ರವಸ್ತ್ರವನುಡಿಸಿ ಗೌರಿಗೆ
ತಿದ್ದಿ ತಿಲಕವನಿಟ್ಟು ತೀವ್ರದಿ ಗೌರಿಯ
ವಜ್ರಮಾಣಿಕ್ಯ ಪೀಠದಲ್ಲಿ ಕುಳಿಸ್ವರೋ ||1||
ಹಪ್ಪಳ ಅತ್ತಿರಸ ಒಪ್ಪುಳ್ಳ ಲಡ್ಡಿಗೆ ಚಕ್ಕುಲಿ ಕರ್ಚಿಯಕಾಯ್ಗಳು
ಸಕ್ಕರೆ ಫೇಣಿ ಕೆನೆಮೊಸರು
ಮಧು ಕ್ಷೀರ ಮೀಸಲಾದ ಅಡಿಗೆ
ಸುವಾಸಿನಿಯರು ಬಡಿಸುವರು||2||
ಅತಿಹಿತದಿಂದಲಿ ಮಾಡಿದ ಅಡಿಗೆಯ
ದಳಿಯ ತಪ್ಪದೆ ಬಡಿಸುವರು
ಪುಡಿಎಣ್ಣೋರಿಗೆ ಶೀಕಿಯದ ಉಂಡೆಗಳು
ಆದಿಕೊಲ್ಹಾಪುರದ ದೇವಿ ಮಹಾಲಕ್ಷ್ಮೀಗೆ||3||
ಮೀಸಲು ಮಂಡಿಗೆ ಸೂಸಲ ಕಡುಬು
ದೋಸೆ ಎಣ್ಣೋರಿಗೆ ನವನೀತ
ಕಾಸಿದ ತುಪ್ಪ ಕೆನೆಮೊಸರು ಮಧು ಕ್ಷೀರ
ಭೀಮೇಶಕೃಷ್ಣನ ರಾಣಿ ಭುಂಜಿಸು ಬೇಗ||4||
**

Comments
Post a Comment