ಕೊಟ್ಟ ಬಿಡಾರದಲಿ ಎಷ್ಟು ದಿನ ಜೀವಿಸಲೊ gurugopala dasaru kotta bidaradali eshtu dina
Restart mobile & try if the above audio is not playing
ಶ್ರೀ ಶ್ರೀಗುರುಗೋಪಾಲದಾಸರ ಕೃತಿ
ರಾಗ : ಮುಖಾರಿ ಆದಿತಾಳ
ಕೊಟ್ಟ ಬಿಡಾರದಲಿ ಎಷ್ಟು ದಿನ ಜೀವಿಸಲೊ |
ಕಷ್ಟ ಪಡಲಾರೆ ಹರಿಯೆ || ಪ |
ಕೋಟಲೆಯ ಸಂಸಾರ ಸಾಗರದಿ ಸಿಲುಕಿ ನಾ |
ಪಾಟು ಬಡಲಾರೆ ಹರಿಯೆ ॥ ಅ ಪ ॥
ಕಟ್ಟುಗಳು ಸಡಲಿದವು ಬಳೆಮೊಳೆ ಕದಲಿದವು |
ದಟ್ಟ ಕಂಭಗಳು ಕುಸಿದವು ।
ಕಟ್ಟು ಪಡಸಾಲೆಗಳು ಬಟ್ಟ ಬಯಲಾದವು |
ಕಟ್ಟಿ ಹೊದ್ದಿಸಲಾರೆನೊ ಸ್ವಾಮಿ ॥ ೧ ॥
ಆರೆರಡು ಹಾರಿದವು ಹಾರಿ ಹೋಯಿತು ಹೊದಿಕೆ |
ಜಾರಿ ಬಿದ್ದವು ಗಳುಗಳು |
ಆರು ಮೂರೆಂಬ ತಲೆಬಾಗಿಲೆಲ್ಲವು ಕುಸಿದು ।
ಸೋರುತಿದೆ ನಾಲ್ಕು ಕಡಿಗೆ ಸ್ವಾಮಿ || ೨ ||
ಗೇಣೇಳು ನಿಚ್ಚಣಿಕೆ ಬಾಣದ ನೆಲೆ ಸೂತ್ರ |
ಕ್ಷೋಣಿಯಲಿ ಓಡ್ಯಾಡುತ
ಪ್ರಾಣ ನಾಯಕ ಗುರುಗೋಪಾಲ ವಿಠಲ ।
ಆನಂದನಿಲಯವಾಸಾ ಶ್ರೀಶಾ ॥ ೩ ॥
**
.jpeg)
Comments
Post a Comment