ದಿಕ್ಕುದೆಸೆ ನೀನೇ ಗುರು ವಾದಿರಾಜ badarayana vittalaru dikku dese neene guru vadiraja
Restart mobile & try if the above audio is not playing
ಶ್ರೀBADARAYANA VITTALARU 1734-1822 Savanur
ಶ್ರೀಬಾದರಾಯಣವಿಠಲಾಂಕಿತ
ಶ್ರೀವಾದಿರಾಜರ ಸ್ತೋತ್ರ ಪದ
ರಾಗ : ಭಾಗೇಶ್ರೀ ಖಂಡಛಾಪುತಾಳ
ದಿಕ್ಕುದೆಸೆ ನೀನೇ ಗುರು ವಾದಿರಾಜ |ಪ|
ಇಕ್ಕೋ ಈ ದೇಹವನು ನಿನಗರ್ಪಿಸಿದೆನೊ |ಅಪ।
ಇನ್ನೊಬ್ಬರಿಗೆ ನಾನು ಶರಣೆನ್ನಲಾರೆನು
ನಿನ್ನಡಿಗೆ ಕೊರಳ ಕಟ್ಟಿದೆನುಸತ್ಯ
ಅನ್ಯಾಯ ನ್ಯಾಯಗಳ ಬಲ್ಲ ಮಹಿಮನು ನೀನು
ನಿನ್ನ ನಂಬಿದ ಮೇಲೆ ಕೆಡಿಸುವವ ನೀನಲ್ಲ |೧|
ಆರಾರಿಗಲ್ಪರಿದು ಆರೇನ ಮಾಡುವರು
ಧೀರ ವಾಗೀಶ ಕರಕಮಲ ಜಾತ ಧಾರುಣಿಯ
ಮೇಲಿನ್ನು ನಿನ್ನಂತ ಕರುಣಿಗಳ
ಆರಾರಿಸಿ ಹುಡುಕಿದರು ನಾಕಾಣೆ ಎನ್ನಾಣೆ |೨|
ವೇದ ವೇದ್ಯಾಚಾರ್ಯ ವಂದಿತ ಪದಾಂಬೋಜ
ಸಾಧುಕುಲ ತಿಲಕ ಸರ್ವಜ್ಞ ಮುನಿಯೇ
ಶ್ರೀಧವಳ ಗಂಗಾ ತಟ ನಿಲಯ ಸಲಹೆಮ್ಮ
ಬಾದರಾಯಣ ವಿಠಲ ಭಕ್ತಾಗ್ರಣಿಯೇ ಎಮಗೆ ।೩।
**
.jpeg)
Comments
Post a Comment