ಆರತಿ ಬೆಳಗೋಣ ಮುತ್ತಿನಾರತಿ ಮಾಡೋಣ arati belagona
ಆರತಿ ಬೆಳಗೋಣ
Restart mobile & try if the above audio is not playing
ಶ್ರೀಕೃಷ್ಣಾಯ ನಮಃ
ಆರತಿ ಬೆಳಗೋಣ ಮುತ್ತಿನಾರತಿ ಮಾಡೋಣ l
ಭಗವದ್ಗೀತೆಯು ಜನಿಸಿದ ದಿನದಿ ಆರತಿ ಬೆಳಗೋಣ ll
ಚಿನ್ನದಾರತಿ ಮಾಡೋಣ llಪll
ಮಹಾಭಾರತದ ಸಾರವೆನಿಸಿದ ಗೀತೆಗೆ ಆರತಿಯ l
ಭಗವದ್ಗೀತೆಗೆ ಆರತಿಯ
ಹಾಡುತ ಪಾಡುತ ನಲಿಯುತ ಭಕುತಿಲಿ ರನ್ನದ ಆರತಿಯ ll
ಬೇಡುತ ಚೆಂದದ ಆರತಿಯ ll1ll
ಲೋಕದಿ ಶಿಕ್ಷಣ ರೀತಿಯ ತೋರಿದ ಕೃಷ್ಣಗೆ ಆರತಿಯ l
ಉಡುಪಿ ಕೃಷ್ಣಗೆ ಆರತಿಯ
ಲೋಕ ಜ್ಞಾನವ ಜಗಕೆ ನೀಡಿದ ಗೀತೆಗೆ ಆರತಿಯ ll
ಗೀತಾ-ಕೃಷ್ಣಗೆ ಆರತಿಯ ll2ll
ವಿಶ್ವರೂಪವ ತೋರಿಹ ವಿಶ್ವರೂಪಿಗೆ ಆರತಿಯ l ವಿಶ್ವರೂಪಿಗೆ ಆರತಿಯ
ವೇದಸಾರವುಪದೇಶಿಸಿದ ವೇದಮೂರುತಿಗಾರತಿಯ ll
ಪಾರ್ಥಸಾರಥಿಗಾರತಿಯ ll3ll
ಭಗವದ್ಗೀತೆಯ ಕಲಿಯುತ ನಾವು ಜೀವನ ಕಟ್ಟೋಣ l
ನಾವು ಜೀವನ ಕಟ್ಟೋಣ
ಭಾರತ ದೇಶದ ಮಕ್ಕಳು ಎಂದು ವಿಶ್ವಕೆ ಸಾರೋಣ ll
ಮಾದರಿಯಾಗುತ ಬೆಳೆಯೋಣ ll4ll
ಮಂಗಳ ದಿನದಲಿ ಮಂಗಳೆ ಗೀತೆಗೆ ಸುಗುಣೇಂದ್ರಸುಶ್ರೀಂದ್ರಸುಪ್ರಿಯ ಸುಪೂರ್ಣಪ್ರಮತಿಯ
ಮಂಗಳಮಯನ ಚರಣಕ್ಕೆರಗುತ ಸುಗುಣವ ಪಾಡೋಣ ಮನದಲಿ ಗೀತೆಯ ನಿಲಿಸೋಣ ll5ll
***
.jpeg)
Comments
Post a Comment