ಸಿಲುಕಿದೆನು ಭವ ಪಾಶದಲಿ ನಾನು ಹರಿಯೆ vyasatatwajna teertharu silukidenu bhava pashadali
Restart mobile & try if the above audio is not playing
ಶ್ರೀ ಶ್ರೀವ್ಯಾಸತತ್ವಜ್ಞತೀರ್ಥರ ಕೃತಿ
purvashrama name: I G Swami Venkataramacharya
1704-1800 ankita-vasudeva vittala
ರಾಗ : ಶುಭಪಂತುವರಾಳಿ ಖಂಡಛಾಪುತಾಳ
ಸಿಲುಕಿದೆನು ಭವ ಪಾಶದಲಿ ನಾನು ಹರಿಯೆ
ಕಿಲಿಕಿಲಿ ನಗುವರೆ ಸಲಹುವದು ದೊರೆಯೆ llಪll
ಕೆಲರ ಮಾತಿಗೆ ಪೋಗಿ ಬಲವಾಗಿ ಅವರ
ಕೆಲಸ ಮಾಡುವೆ ನಿಜ ಕೆಲಸವ ಮರೆದೆ ನಾ ll1ll
ಧರಣಿಯ ಪತಿಸೇವೆ ಶರಣೆಂದು ತಿಳಿದು
ಮರೆದೆನೊ ನಿನ್ನ ಪಾದ ಸಿರಿಯ ರಮಣನೆ ll2ll
ಉದರಗೋಸುವಾಗಿ ಮರೆದವರ ವಶದಿ
ಹದನವ ಕಳಕೊಂಡು ಮದಡ ನಾನಾದೆನೊ ll3ll
ಉಣುವೆನೊ ಪರರನ್ನ ದಣಿವೆನೊ ಅದಕ್ಕೆ
ಕುಣಿವೆನೊ ಅವರಂತೆ ಗುಣವೇನು ಎನಗೆ ll4ll
ಈಸು ಪರಿಯಲೆನ್ನ ಶ್ರೀಶ ದಾಸರ ವಶದಿ
ವಾಸವಿತ್ತು ಬದುಕಿಸೊ ವಾಸುದೇವವಿಠಲ ll5ll
**

Comments
Post a Comment