ಕಂಗಳಿಗೆ ಹಬ್ಬವಾಯಿತಯ್ಯ vyasarajaru kangalige habbavayitayya

 


 Restart mobile & try if the above audio is not playing



ಶ್ರೀವ್ಯಾಸರಾಜರ ಕೃತಿ

ರಾಗ : ಆನಂದಭೈರವಿ   ಏಕತಾಳ


ಕಂಗಳಿಗೆ ಹಬ್ಬವಾಯಿತಯ್ಯ

ಮಂಗಳಾತ್ಮಕ ಪುರಂದರದಾಸರನು ಕಂಡು  llಪll


ಸಕಲ ತೀರ್ಥಕ್ಷೇತ್ರ ಯಾತ್ರೆ ಮಾಡಿದ ಫಲವು

ಸಕಲಸತ್ಕರ್ಮ ಸಾಧಿಸಿದ ಫಲವು

ಭಕುತಿಯಿಂ ಭಾಗೀರಥೀ ಮಜ್ಜನದಫಲವು

ರುಕುಮಿಣಿ ಪತಿಯ ಪದ ಭಕುತರನು ಕಂಡು ||1||


ಇವರ ನರರೆಂದವರು ನರಕದಲಿ ಬೀಳುವರು

ಕವಿಜನರು ಒಪ್ಪಿ ಕೈಹೊಡೆದು ಹೇಳಿರಲು

ಅವನಿಯೊಳಗತಿ ದುರ್ಲಭವು

ನಂದ- ಗೋಪನ್ನಕುವರನಿದ್ದೆಡೆಯೆ ವೈಕುಂಠವೆಂಬುವರ ಕಂಡು |2||


ಧನ್ಯನಾದೆನು ನಾನು ಮನುಜನ್ಮದಿ ಪುಟ್ಟಿ

ಮಾನ್ಯನಾದೆನು ಇನ್ನು ಈ ಜಗದೊಳಗೆ

ಪನ್ನಂಗಶಯನ ಶ್ರೀಕೃಷ್ಣನದಾಸರನು

ಚೆನ್ನಾಗಿ ಸ್ಮರಿಸಿ ಪಾವನ್ನನಾದೆನಿಂದು ||3||

**

Comments