ಕರೆತಾರೆಲೆ ರಂಗನ ಶ್ರೀಹರಿಯ vyasarajaru karetarele rangana srihariya
ಶ್ರೀವ್ಯಾಸರಾಜರ ಕೃತಿ
ರಾಗ : ಸಾರಂಗ ಮಿಶ್ರಛಾಪುತಾಳ
ಕರೆತಾರೆಲೆ ರಂಗನ ಶ್ರೀಹರಿಯ ನೀ
ಕರೆತಾರೆಲೆ ರಂಗನ llಪll
ಕರೆದು ತಾರೆಲೆ ಕಮಲನಾಭನ
ಕರೆದು ತಾರೆಲೆ ಕರುಣನಿಧಿಯನು
ಕರೆದು ತಾ ಕಾಲಲ್ಲಿ ಗಂಗೆಯ
ಸುರಿದ ಬಾಲ ಬ್ರಹ್ಮಚಾರಿಯ llಅ.ಪll
ಮಧು ಕೈಟಭಾಸುರರ ಸಂಹರಿಸಿದ,
ಮತ್ಸ್ಯಾವತಾರನನು
ಮುದದಿ ಮಂದರಗಿರಿಯನೆತ್ತಿದ
ಸುರರಿಗಮೃತವನಿತ್ತ ಕೂರ್ಮನ
ಧರೆಯನುದ್ಧರಿಸಿದ ವರಾಹನ
ತರುಣಿ ನೀನೀಗ ತಂದು ತೋರೆಲೆ 1
ಬಾಲನಿಗೊಲಿದವನ,
ಭಕ್ತ ನಿಧಿಯಾದ ನರಸಿಂಹನ
ಧರೆಯ ನೀರಡಿ ಅಳೆದ ವಾಮನ
ದೊರೆಯ ನಾನಿನ್ನೆಂದು ಕಾಂಬೆನೆ
ಭರದಿ ಭಾರ್ಗವನಾದ ರಾಮನ
ತರುಣಿ ತ್ವರಿತದಿ ತಂದು ತೋರೆಲೆ2
ದಶಶಿರ ನಳಿದವನ ಗೋಕುಲದಲ್ಲಿ,
ದಧಿಘೃತ ಮೆದ್ದವನ
ದುರುಳ ತ್ರಿಪುರರ ಗೆಲಿದ ಬೌದ್ಧನ
ಹರುಷದಲಿ ಹುಯವೇರಿ ಮೆರೆದನ
ಸುಜನ ರಕ್ಷಕನಾದ ಕೃಷ್ಣನ
ಸುದತಿ ನೀನೀಗ ತಂದು ತೋರೆಲೆ 3
***

Comments
Post a Comment