ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ vijaya dasaru barayya srinivasa bhaktara balige

Restart mobile & try if the above audio is not playing

ಶ್ರೀವೈಶಾಖ ಶುದ್ಧ ದಶಮಿ(ಶ್ರೀನಿವಾಸ ಕಲ್ಯಾಣ)ಯ ನಿಮಿತ್ತ 

ಶ್ರೀವಿಜಯದಾಸರ ಕೃತಿ

ರಾಗ : ಭೈರವಿ     ಆದಿತಾಳ


ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ

ತೋರಯ್ಯ ನಿನ್ನ ದಯ ತೋಯಜಾಂಬಕನೆ


ದುರುಳರ ತರಿವಂಥ ವರಚಕ್ರಧಾರಿ

ಪರಮಾತ್ಮ ಪರಬೊಮ್ಮ ಪರರಿಗುಪಕಾರಿ||1||


ಅರಣ್ಯದಿ ಮೊರೆಯಿಟ್ಟು ಕರಿರಾಜಗೊಲಿದಿ

ತರಳ ಪ್ರಹ್ಲಾದನ್ನ ವೈರಿಯ ಮುರದಿ ||2||


ವರ ಷೋಡಶ ಗಿರಿಯಲ್ಲಿ ನಿರುತ ನೀನಿರುವಿ

ಹರಿದಾಸರು ಕರೆದರೆ ಎಲ್ಲಿದ್ದರೆ ಬರುವಿ||3||


ಅನಂತನಾಮನೆ ನಿನ್ನ ಅನಂತ ಸದ್ಗುಣವ

ನೆನೆವರಿಗೊಲಿವಂಥ ಪವಮಾನನೀಶಾ ||4||


ಅಜಭವಾಧಿಪ ನೀನು ವಿಜಯಸಾರಥಿಯೇ

ತ್ರಿಜಗವಂದಿತ ಈಶ ವಿಜಯವಿಠ್ಠಲನೇ ||5||

**


vaishaka shudda dashami - srinivasa kalyana


raaga : bhairavi


aaditala


Bārayya śrīnivāsa bhaktara baḷige || pa ||


tōrayya ninna pāda tōyajāmbakane || a.Pa. ||


Duruḷara tarivantha varacakradhāri paramātma parabom’ma pararigupakāri || 1 ||


araṇyadi moreyiṭṭa karirājagolidi taraḷa prahlādanna vairiya muradi || 2 ||


vara ṣōḍaśa giriyalli niruta nīniruvi haridāsaru karedare elliddare baruvi || 3 ||


anantanāmane ninna ananta sadguṇava nenevarigolivantha pavamānanīśā || 4 ||


ajabhavādhipa nīnu vijayasārathiyē trijagavandita īśa vijayaviṭhṭhalanē || 5 ||

**

Comments