ಏನು ಸುಕೃತವೋ ಮಧುರಾ ನಗರಕೆ vidyaprasanna teertharu enu sukrutave madhura nagarake

Restart mobile & try if the above audio is not playing

ಶ್ರೀ ಶ್ರೀವಿದ್ಯಾಪ್ರಸನ್ನತೀರ್ಥರ ಕೃತಿ

ರಾಗ : ವಲಚಿ    ಆದಿತಾಳ


ಏನು ಸುಕೃತವೋ ಮಧುರಾ ನಗರಕೆ ಪ

ಗಾನಲೋಲ ಹರಿ ತಾ ನೆಲೆಸಿಹುದು ಅ.ಪ


ವರ ವಿಭವಗಳುಳ್ಳ ಪುರಗಳಂತಿರಲು

ಪರಮ ಪುರುಷ ಹರಿ ವಿರಾಜಿಸುತಿರಲು 1


ಭೂಪ ನಗರಗಳಿಗೀ ಪರಿಯುಂಟೆ

ಗೋಪಾಲಕ ಹರಿ ಕಾಪಾಡುತಿಹುದು 2


ಸುಮನಸಪುರವಾದ ಅಮರಾವತಿಗುಂಟೆ

ಕಮಲನಯನ ಹರಿ ಸಮಾಗಮವು ಸದಾ 3


ದಿವಿಜರೊಡೆಯ ಹರಿ ಭುವಿಯಲಿ ಅರಿಸಿ

ಅವತರಿಸುತ ತನ್ನ ಪ್ರವಾಸಗೈದುದು 4


ನಿರುಪಮ ಆನಂದಪೂರ್ಣ ಪ್ರಸನ್ನನು

ಪರಿಪರಿ ವಿಧದಲಿ ವಿರಾಜಿಸುತಿರಲು 5

**

Comments