ಶ್ರೀಪಾದರಾಜ ಸಂದರ್ಶನದಿ ಸಕಲ vidyaprasanna teertharu sripadaraja sandarshanadi sakala
Restart mobile & try if the above audio is not playing
ಶ್ರೀ ಶ್ರೀವಿದ್ಯಾಪ್ರಸನ್ನತೀರ್ಥ ವಿರಚಿತ ಶ್ರೀಪಾದರಾಜರ ಸ್ತೋತ್ರ ಪದ
ರಾಗ : ಹಂಸಾನಂದಿ ಆದಿತಾಳ
ಶ್ರೀ ಪಾದರಾಜ ಸಂದರ್ಶನದಿ ಸಕಲ ಸಂತಾಪಗಳು ಕಳೆದುವಿಂದು ॥ಪ॥
ತಾಪಸೋತ್ತಮರಿವರು ಇಹ ಪರಗಳಲ್ಲೆಮ್ಮ
ಕಾಪಾಡುತಿರುವರೆಂದು ॥ಅ.ಪ॥
ಸ್ವರ್ಣವರ್ಣರ ಕುವರ ಜ್ಞಾನಭಕ್ತಿಗಳಿಂದ
ಪೂರ್ಣರಿದ್ದರು ಲೋಕದಿ
ಸ್ವರ್ಣಾಕ್ಷರಗಳಿಂದ ಬರೆಯುವಂತಹ ಶಾಸ್ತ್ರ
ನಿರ್ಣಯಗಳಿತ್ತರಿವರು ॥೧॥
ಮಂಗಳಾತ್ಮಕ ನಮ್ಮ ರಂಗವಿಠಲ ಕೃಪಾ
ಪಾಂಗ ಪಾತ್ರರು ಪೂಜ್ಯರು
ಕಂಗಳಿಗೆ ಹಬ್ಬವಿದು ಮಂಗಳಕೆ ಸಾಧನವು
ಹಿಂಗಿತು ಎಮ್ಮಯ ಕೊರತೆಯು ॥೨॥
ಜ್ಞಾನ ಭಂಡಾರವನು ಲೋಕಕೀಯಲು ಶುದ್ಧ
ಮಾನಸ ಪ್ರಸನ್ನರಿವರು
ಮೌನಿವರ ವ್ಯಾಸತೀರ್ಥರಲಿ ಪರಮಾದರದಿ
ಜ್ಞಾನಧಾರೆಯ ಕರೆದರು ॥೩॥
**

Comments
Post a Comment