ಮುರಳಿಯ ಬಾರಿಸೋ ಮಾಧವ vidyaprasanna teertharu muraliya bariso madhava


Restart mobile & try if the above audio is not playing

ಶ್ರೀವಿದ್ಯಾಪ್ರಸನ್ನತೀರ್ಥರ ಕೃತಿ

ರಾಗ : ಸಿಂಧುಭೈರವಿ    ಆದಿತಾಳ


ಮುರಳಿಯ ಬಾರಿಸೋ ಮಾಧವ 

ಮುರಳಿಯ ಬಾರಿಸೋ ಮಾಧವ ಕುಣಿಯುವೆ ||ಪ||


ಭವದ ಸಂತಾಪವು ಕೊನೆಯಾಗಲಿ |

ಭುವಿಯೊಳು ಜೀವನ ಸವಿಯಾಗಲಿ ||

ನವವಿಧ ಭಕುತಿಯು ನಲಿದಾಡಲಿ |

ಕಿವಿತುಂಬ ಕೇಳಿ ನಾ ನಲಿಯುವೆ ಶ್ರೀಕರ ||1||


ಅರಿಷಡವರ್ಗಗಳೆಲ್ಲ ಮರೆಯಾಗಲಿ |

ಹರುಷ ಮಾನಸದಲ್ಲಿ ಸೆರೆಯಾಗಲಿ ||

ಮುರಳಿಯ ಧ್ವನಿಯು ತಾ ದೊರೆಯಾಗಲಿ |

ಪರಮ ವೈರಾಗ್ಯವೆ ಸಿರಿಯಾಗಲಿ ದೇವ ||2||


ಸಾಲೋಕ್ಯ ಸಾರೂಪ್ಯ ಸಾಯುಜ್ಯವು |

ಈ ಲೋಕದಲ್ಲೀಗ ಈ ಲಾಭವು ||

ಶ್ರೀಲೋಲ ಗೋಪಾಲ ಬಾಲ ಪ್ರಸನ್ನನೆ |

ಮೇಲಾಯ್ತು ನರಜನ್ಮ ಇರಲಿ ಎಂದೆಂದದಿಗು ||3||

**


Sri Vidyaprasannaterrthara kriti


raga : Sindhubhairavi

aaditala


Muraleeya bariso madhava 

Muraliya baariso madhava kuniyuve || pa ||


Bhavada santapavu koneganali |

Bhuviyolu jeevana saviyagali ||

Navavidha bhaktiyu nalidadali |

Kivitunba keli na naliyuve sreedhara ||1|| 


Arishadvargagalella mareyagali |Harusha manasadalli sereyagali || Muraliyadhvaniyu ta doreyagali | Paramavairagyave siriyagali deva ||2||


Salokya saroopya sayujyavu | Eelokadalliga  ee laabhavoo ||

Shreelola gopala bala prasannane | Melaytu narajanma iralee endendigoo || 3 ||

**

Comments