ಗತಿ ನೀ ನಮಗೆ ಗುಣವಂತ ಹನುಮಂತ vadirajaru gati nee namage gunavanta
Restart mobile & try if the above audio is not playing
ಶ್ರೀಶ್ರೀವಾದಿರಾಜರ ಕೃತಿ
ರಾಗ : ಧರ್ಮವತಿ ಆದಿತಾಳ
ಗತಿ ನೀ ನಮಗೆ ಗುಣವಂತ ಹನುಮಂತ
ದಿತಿಜರಿಗೆ ದುರಾಂತ ಕೃತಾಂತ॥ಪ॥
ಕೇಸರಿತನಯ ದಕ್ಷಿಣನಾಗಿ ಬಂದೆ
ವ-ರುಷಗಳಿಂದಲಿ ಬಲುಗಿರಿಯನು ತಂದೆ
ಈಶ ರಘುಪತಿ ಸೇವೆ ಘನವಾಗಿ ನಿಂದೆ
ಅಸುರ ರಾವಣನ ಸರ್ವ ಸೈನ್ಯವ ಕೊಂದೆ ॥೧॥
ಅಂಬುಧಿಯ ದಾಂಟಿ ಸೀತೆಯ ರೂಪ ಕಂಡೆ
ಕುಬುದ್ಧಿಯ ರಾವಣನ ಪುರವ ಸೂರೆಗೊಂಡೆ
ವಿಬುಧರ ಸ್ನೇಹವ ಮಾಡಿದೆ ಬಲುಗಂಡೆ
ಪ್ರಬುದ್ಧರಂದದಿ ಪುಣ್ಯಫಲರಸ ಉಂಡೆ ॥೨॥
ಹಯವದನನ ಕೃಪೆ ಪ್ರಿಯ ಹೂಡಿ ಪೊತ್ತೆ
ಪ್ರಿಯವಾದ ಭವತರುವಿನ ಬೇರ ಕಿತ್ತೆ
ಭಯವ ಖಂಡಿಸಿ ನಮಗೆ ಅಭಯವನಿತ್ತೆ
ಜಯಜಯ ಪ್ರಾಣನಾಥ ನಮೋ ನಮಸ್ತೆ ॥೩॥
**

Comments
Post a Comment