ಸ್ಮರಿಸಿ ಸುಖಿಸೆಲೊ ಮಾನವಾ tandevaradagopala dasaru smarisi sukhiselo manava

Restart mobile & try if the above audio is not playing

ಶ್ರೀ ತಂದೆ ವರದ ಗೋಪಾಲದಾಸರು "ಗೋಪಾಲದಾಸರನ್ನು" ಕುರಿತು ರಚಿಸಿರುವಂತಹ ಕೃತಿ

ರಾಗ : ಶಂಕರಾಭರಣ    ಆದಿತಾಳ


ಸ್ಮರಿಸಿ ಸುಖಿಸೆಲೊ ಮಾನವಾ ॥ಪ॥


ಸ್ವಾನುಭಾವದಿಂದ ಸುಖವಬಡಿಪ

ಗೋಪಾಲದಾಸರಾಜರಡಿಗಳನುದಿನಾ ॥ಅ.ಪ॥


ಅಪಾರ ಜನುಮದ ದಾಸ್ಯಹರಿಸಿ 

ಸುಖಸಾರಸುರಿಪರು ಅನುದಿನಾ ॥೧॥


ಸತ್ಯವಾದ ವಚನ ಸತ್ವಜೀವರಿಷ್ಟ-

ಗರೆವ ಚಿತ್ತದೊಳಗೆ ಅನುದಿನಾ ॥೨॥


ಸರ್ವ ವಿಧದಿ ತೋಷಬಡಿಪ

ತಂದೆವರದಗೋಪಾಲವಿಠಲನೇ ಸಾಕ್ಷಿಯಾಗಿಪ್ಪನನುದಿನಾ॥೩॥

**

Comments