ವಾದಿರಾಜಾ ಪಾಲಿಸು ಎನ್ನ swamirayacharya vadiraja palisu enna
Restart mobile & try if the above audio is not playing
ಶ್ರೀ swamirayacharya 1837-1918
ರಾಗ ಕಲ್ಯಾಣಿ ಆದಿತಾಳ
ವಾದಿರಾಜಾ ಪಾಲಿಸು ಎನ್ನ ||pa||
ವಾದಿರಾಜ ತವ ಪಾದಸರೋಜಾ
ಮೋದಪರಾಗವ ಸಾದರ ನೀಡಿ||a.pa||
ಮೋದತೀರ್ಥಸುಮತೋದಧಿಚಂದಿರ
ಪಾದವ ನಂಬಿದೆ ನೀ ದಯದಲಿ ||1||
ಅರ್ತಜನರ ಮನದಾರ್ತಿಯ ಕಳೆದಿಹ
ವಾರ್ತದಿ ಬಂದವನಾರ್ತಿಯ ಬಿಡಿಸೋ ||2||
ಎಲ್ಲರಂತೆ ನೀನಲ್ಲವೊ ಜಗದೊಳು
ಬಲ್ಲಿದನೆಂಬೊದು ಬಲ್ಲೆ ಬಲ್ಲೆನು ||3||
ಕುರ್ತುಮಕರ್ತುಸಮರ್ಥನೆ ಎನ್ನನು
ಮರ್ತರೆ ಅನ್ಯ ಸಮರ್ಥರ ಕಾಣೆ ||4||
ಕಾಮಧೇನು ಸಮ ಭೂಮಿಯ ತಳದಿ
ಕಾಮಿತನೀಡೈ ಸುರತರುವೇ ||5||
ಮೋಕ್ಷದ ಕರುಣ ಕಟಾಕ್ಷದಿ ಎನ್ನಾ
ವೀಕ್ಷಿಸಿ ಮನದಾಪೇಕ್ಷವ ಸಲಿಸೋ ||6||
ಯಾತಕೆ ಎನ್ನನು ಈತೆರ ಮಾಡಿದೇ
ನೀತ ಗುರುಜಗನ್ನಾಥವಿಠಲ ದೂತ ||7||
**

Comments
Post a Comment