ವಿಜಯಮೂರುತಿ ಪೊರೆಯೋ ವಿಜಯೀಂದ್ರಯತಿವರ್ಯ surapura ananda dasaru vijayamuruti poreyo vijayeendra yati

Restart mobile & try if the above audio is not playing

ಶ್ರೀ ಶ್ರೀಸುರಪುರದ ಆನಂದದಾಸಾರ್ಯ 

ಕಮಲೇಶ,ಕಮಲೇಶವಿಠಲಾಂಕಿತ ವಿರಚಿತ-ವಿಜಯೀಂದ್ರತೀರ್ಥರ ಸ್ತೋತ್ರ ಪದ

ರಾಗ : ಭೌಳಿ   ಆದಿತಾಳ


ವಿಜಯಮೂರುತಿ ಪೊರೆಯೋ ವಿಜಯೀಂದ್ರಯತಿವರ್ಯ |

ವಿಜಯನಗರೇಶನುತ ಪಾದಪಂಕಜನೇ | |ಪ ||


ಕಾವೇರಿ ತಟನಿಕಟ ಕುಂಭಕೋಣಾವಾಸಿ |

ಶೈವಯತಿಮತ್ತೇಭ ಪಂಚಾನನ || ಅ.ಪ. ||


ಪರಮಗುರು ಶ್ರೀಮದಾನಂದತೀರ್ಥೋಧ್ಯಾನ

ಪರಶಾಸ್ತ್ರವೆಂಬ ಸತ್ಸಾರಸದಿ ವಿಹರಿಸುವ |

ಪರಮಹಂಸನೇ ಯಮ್ಮ ಪರಿಕ್ಷಿಸಿದಲನವರತ

ಪರವಾದಿಜಯವೀಯೋ ನರಹರಿಯ ಪ್ರಿಯನೇ || 1 ||


ಹತ್ತ್ಹತ್ತು ನಾಲ್ಕು ಸತ್ಕೃತಿಗಳನು ವಿರಚಿಸಿ

ಮಿಥ್ಯವಾದವ ಮುರಿದ ಸತ್ಯಶೀಲ ಯತೀಂದ್ರ |

ಮತ್ತಕಾಮಿನಿಯರಂ ಕಣ್ಣೆತ್ತಿ ನೋಡದಲೆ

ಚಿತ್ತೇಶನಂ ಗೆಲಿದೆ ಸುತ್ತಲೂ ಕಾಯೆಮ್ಮ || 2 ||


ಪಂಥವನು ತೊಟ್ಟು ಅಪ್ಪಯ್ಯದೀಕ್ಷಿತರೆಂಬ

ಮತ್ತವಾದಿಯ ಜಯಿಸಿ ಮಧ್ವಮತ ರಕ್ಷಿಸಿದೆ |

ಪತಿತಪಾವನ ನಮ್ಮ ಕಮಲೇಶನಂಘ್ರಿಯನು

ನುತಿಸುತ್ತಲನವರತ ಭುಕುತರನು ಪೊರೆಯುತಿಹೆ || 3 ||

**

Comments