ನೀ ಎನ್ನ ಕಾಯಬೇಕಯ್ಯ ಆಂಜನೇಯ sripadarajaru nee enna kayabekayya anjaneya
Restart mobile & try if the above audio is not playing
ಶ್ರೀಶ್ರೀಪಾದರಾಜರ ಕೃತಿ
ರಾಗ : ಮಧ್ಯಮಾವತಿ ಏಕತಾಳ
ನೀ ಎನ್ನ ಕಾಯಬೇಕಯ್ಯ ಆಂಜನೇಯ
ನಾನು ನಿನ್ನ ಭಜಿಸಬೇಕಯ್ಯ॥ಪ॥
ನೀನು ಎನ್ನ ಕಾಯಬೇಕು
ನಾನು ನಿನ್ನ ಭಜಿಸಬೇಕು
ನೀನು ನಾನು ಒಂದು ಗೂಡಿ
ರಾಮ ಭಜನೆಯ ಮಾಡಬೇಕು॥ಅ.ಪ॥
ಆ ಜನ್ಮ ಬ್ರಹ್ಮಚಾರಿ
ಅಪ್ರತಿಮ ಬಲಶಾಲಿ ನೀನು
ರಾಮಭಕ್ತಿಯ ಭಂಡಾರವ
ಲೋಕಕೆಲ್ಲವ ತೋರಿದಾತ॥೧॥
ಭಕ್ತರ ಸಂಸಾರ ಜಲಧಿಯು
ರಾಮನಾಮದ ನೌಕೆಯಲ್ಲಿ
ದಾಟಿ ಹೊರಟಿಹ ನಾನು ಪಯಣಿಗ
ನೀನೆ ಅಂಬಿಗ ದಾಟಿಸಯ್ಯ॥೨॥
ಮಾತೆಗೆ ಮುದ್ರಿಕೆಯಿತ್ತವನೀತ
ಲಂಕಾಪುರವನುದ್ಧರಿಸಿದನೀತ
ರಂಗವಿಠಲನ ಪ್ರೀತನೀತ
ವೀರಪ್ರತಾಪಿ ಆಂಜನೇಯ॥೩॥
**

Comments
Post a Comment