ಏನ ಪೇಳಲೆ ಗೋಪಿ ನಿನ್ನ ಮಗನ ಜಾಲ purandara dasaru ena pelale gopi ninna magana

 

Restart mobile & try if the above audio is not playing

ಶ್ರೀಶ್ರೀ ಪುರಂದರದಾಸರ ಕೃತಿ 

 ರಾಗ : ಮಾಂಡ್      ಆದಿತಾಳ 


ಏನ ಪೇಳಲೆ ಗೋಪಿ ನಿನ್ನ ಮಗನ ಜಾಲ ॥ ಪ ॥

ಮಾನ ತಪ್ಪಿ ಬಂದ ಮನೆಯೊಳಗೆ ಗೋಪಿ   ॥ ಅ ಪ ॥


ಕೊಡ ಹಾಲು ಕುಡಿದನೆ ಗಡಿಗೆಯ ಒಡೆದನೆ ।

ಅಡಗಿದ್ದನೆ ದೊಡ್ಡ ಕೊಡದೊಳಗೆ ॥

ಹುಡುಗ ಸಿಕ್ಕಿದನೆಂದು ಹೊಡೆಯಲು ಹೋದರೆ ।

ಬಡವರ ಮಗನೇನೆ ಹೊಡೆಯಲಿಕ್ಕೆ ಗೋಪಿ ॥ 1 ॥


 ಅಳಿಯನ ವೇಷದಿ ಮಗಳ ಕರೆಯ ಬಂದ ।

ಕಲಹ ಮಾಡಿ ತಾ ಕಳಿಸೆಂದ ॥

ಒಲುಮೆಯಿಂದಲಿ ತಿಂಗಳೆರಡಿಟ್ಟುಕೊಂಡರೆ ।

ಗಿಳಿಯಂಥ ಹೆಣ್ಣಿನ ಕೆಡಿಸಿದನೆ ಗೋಪಿ ॥ 2 ॥


 ಇಷ್ಟೊಂದು ಸಿಟ್ಟೇಕೆ ಚಿಣ್ಣ ಕೃಷ್ಣನ ಮೇಲೆ ।

ಪುಟ್ಟಿಸಬೇಡಿರೆ ಅನ್ಯಾಯವ ॥

ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ ।

ದೃಷ್ಟಿಸಿ ನೋಡಿರೆ ತೊಟ್ಟಿಲಿನೊಳಗೆ ॥ 3 ॥

**

Comments