ಗರುಡ ಗಮನ ಬಂದನೋ purandara dasaru garuda gamana bandano

 Restart mobile & try if the above audio is not playing

ರಚನೆ : ಶ್ರೀ ಪುರಂದರದಾಸರು.

ರಾಗ : ಚಂದ್ರಕೌನ್ಸ.   ತಾಳ : ಆದಿ. 


ಗರುಡ ಗಮನ ಬಂದನೋ-ನೋಡಿರೊ |

ಗರುಡ ಗಮನ ಬಂದನೋ ||ಪ||


ಗರುಡ ಗಮನ ಬಂದ ಧರಣಿಯಿಂದೊಪ್ಪುತ|

ಕರೆದು ಬಾರೆನ್ನುತ ವರಗಳ ಬೀರುತ ||ಅ.ಪ||


ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ |

ಚಿನ್ನದೋಲ್ ಪೊಳೆವ ವಿಹಂಗ ರಥದಲಿ ||

ಘನ್ನ ಮಹಿಮ ಬಂದ ಚ್ಛಿನ್ನ ಮೂರುತಿ ಬಂದ |

ಸಣ್ಣ ಕೃಷ್ಣನು ಬಂದ ಬೆಣ್ಣೆಗಳ್ಳನು ಬಂದ ||1||


ಪಕ್ಷಿವಾಹನ ಬಂದ ಲಕ್ಷ್ಮೀಪತಿಯು ಬಂದ |

ಕುಕ್ಷಿಯೊಳೀರೇಳು ಜಗವನಿಟ್ಟವ ಬಂದ ||

ಸೂಕ್ಷ್ಮ-ಸ್ಥೂಲದೊಳಗಿರುವನು ತಾ ಬಂದ |

ಸಾಕ್ಷೀ ಭೂತನಾದ ಸರ್ವೇಶ್ವರ ಬಂದ ||2||


ವರದ ಪುರಂದರ ವಿಠಲರಾಯನು ಬಂದ |

ಬಂದು ನಿಂದು ನಲಿದಾಡುತಲಿಪ್ಪನು ||

ಅಂದು ಸಾಂದೀಪನ ನಂದನನ ತಂದಿತ್ತ|

ಸಿಂಧು ಶಯನ ಆನಂದ ಮೂರುತಿ ಬಂದ ||3||

***


Raaga : chandrakauns. 

Taala : aadi. 


Garuḍa gamana bandanō-nōḍiro |

garuḍa gamana bandanō ||pa||


garuḍa gamana banda dharaṇiyindopputa|

karedu bārennuta varagaḷa bīruta ||a.Pa||


enna rakṣipa dore illige tā banda |

cinnadōl poḷeva vihaṅga rathadali ||

ghanna mahima banda cchinna mūruti banda |

saṇṇa kr̥ṣṇanu banda beṇṇegaḷḷanu banda ||1||


pakṣivāhana banda lakṣmīpatiyu banda |

kukṣiyoḷīrēḷu jagavaniṭṭava banda ||

sūkṣma-sthūladoḷagiruvanu tā banda |

sākṣī bhūtanāda sarvēśvara banda ||2||


varada purandara viṭhalarāyanu banda |

bandu nindu nalidāḍutalippanu ||

andu sāndīpana nandanana tanditta|

sindhu śayana ānanda mūruti banda ||3||

**

Comments