ಬಣ್ಣಿಸಲಳವೇ ನಿನ್ನ ಪನ್ನಗಶಯನ pranesha dasaru bannisalalave ninna pannagashayana
Restart mobile & try if the above audio is not playing
ಶ್ರೀ ಶ್ರೀಪ್ರಾಣೇಶದಾಸರ ಕೃತಿ
ರಾಗ : ಹಂಸಧ್ವನಿ ಆದಿತಾಳ
ಬಣ್ಣಿಸಲಳವೇ ನಿನ್ನ ಪನ್ನಗಶಯನ
ಪ್ರಸನ್ನವತ್ಸಲ ರಂಗ ಪಾಂಡುರಂಗ ವಿಠಲ॥ಪ॥
ಮಧುಕೈಟಭಾಂತಕನೆ ಮಧುರಾಪತಿ ಜಿತನೆ
ಮಧುಸಖ ಜನಕನೆ ಮಧುಮಾಂಶ್ರಿಯಾಂಬಕನೆ॥೧॥
ಋಷಿಪತ್ನಿಯರ ಮೋಹಕ ಋಷಿಪತ್ನಿಯ ತಾರಕ
ಋಷಿಪತ್ನಿಯನಾಶಕ ಋಷಿಪತ್ನಿ ಬಾಲಕ ॥೨॥
ಪದುಮ ಸಂಭವನಯ್ಯ ಪದುಮೇಶ ಕವಿಗೇಯ
ಪದುಮ ವರದಜೀಯಾ ಪದುಮಜಾಂಡದೊಡೆಯ॥೩॥
ಭಾನುಕೋಟಿಪ್ರಕಾಶ ಭಾನುಲೋಚನಾಧೀಶ
ಭಾನುಪ ಸುತಪೋಷ ಭಾನುಪಾಣಿ ನಿರ್ದೋಷ॥೪॥
ಹರಿ ಪ್ರಾಣೇಶವಿಠಲ ಹರಿಶಯನಮತ್ಪ್ರೀಯ
ಹರಿಯಾಸ್ಯ ನರದೇಹ ಹರಿಸುವುದಘ ತ್ವರಿಯಾ॥೫॥
**
.jpeg)
Comments
Post a Comment