ಬೇಡುವರೋ ಸುಖವ ರಂಗಯ್ಯ ನಿನ್ನ pranesha dasaru beduvaro sukhava rangayya

Restart mobile & try if the above audio is not playing

ಶ್ರೀಶ್ರೀಪ್ರಾಣೇಶದಾಸರ ಕೃತಿ

ರಾಗ : ಪಂತುವರಾಳಿ   ಆದಿತಾಳ


ಬೇಡುವರೋ ಸುಖವ ರಂಗಯ್ಯ ನಿನ್ನ

ಬೇಡುವರೋ ಸುಖವ|| ಪ ||


ಬೇಡುವರೋ ಸುಖ ಬೇಡರು ಕಷ್ಟವ

ಮಾಡಲರಿಯರಿದರುಪಾಯವ ||ಅ ಪ ||


ಕಿಟ್ಟಾ ತುಳಿದು ಒಮ್ಮನ್ಹಿಟ್ಟಾ ಬೀಸುವರು

ಕುಟ್ಟರು ರಂಗವಲ್ಲಿಯ

ಸಾಲುಸಾಲೆಮ್ಮೆಯ ಸೋಲದೆ ತೊಳೆವರು

ಸಾಲಿಗ್ರಾಮಕೆ ನೀರೆರೆಯರೊ ಜನ || 1||


ಬೀಗರೂಟಕೆ ಅನೇಕ ಭೋಗವು

ಜೋಳವು ಓಗರ ಬ್ರಾಹ್ಮರೆಲೆಯೊಳು

ಖಮ್ಮನೆ ತುಪ್ಪ ತಮ್ಮನೆಯವರಿಗೆ

ಖಮ್ಮಟು ದೇವ ಬ್ರಾಹ್ಮಣರಿಗೆ ||2 ||


ಇದ್ದ ಪದಾರ್ಥವನ್ನು ಶುದ್ಧ ಭಕುತಿಯಿಂದ

ಮಧ್ವೇಶಗರ್ಪಿಸಿ ಭುಂಜಿಸರೋ

ಕೆಟ್ಟದ್ದು ತಾವು ಮಾಡಿ ಬಿಟ್ಟೆಮ್ಮನು ಪ್ರಾಣೇಶ

ವಿಟ್ಠಲನೆಂದು ಮಿಡುಕುವರೋ ಜನ|| 3||

** 

Comments