ಏನೋ ಈ ವೇಷ ವೇದವ್ಯಾಸ mohana dasaru eno ee vesha vedavyasa

Restart mobile & try if the above audio is not playing



ಶ್ರೀಶ್ರೀಮೋಹನದಾಸಾರ್ಯ ವಿರಚಿತ


ಶ್ರೀವೇದವ್ಯಾಸದೇವರ ಸ್ತೋತ್ರ ಪದ


ರಾಗ : ಕಾಂಬೋಧಿ

ಆದಿತಾಳ


ಏನೋ ಈ ವೇಷ ವೇದವ್ಯಾಸ ||pa||


ಭಾನುಕೋಟಿ ಪ್ರಕಾಶ ಬದರೀ ನಿವಾಸ ||a.pa||


ದ್ರೌಪದಿ ಕರೆಯಲಪಾರ ವಸ್ತ್ರವನಿತ್ತೆ

ಕೌಪೀನ ಧರಿಸಿದ ಕೌತುಕವೇನಯ್ಯ ||1||


ಮುತ್ತು ಮಾಣಿಕ್ಯ ನವರತ್ನ ಮಕುಟವಿರೆ

ನೆತ್ತಿಲಿ ಕೆಂಜೆಡೆ ಪೊತ್ತುಕೊಂಡಿಪ್ಪುದು ||2||


ವರ ವೈಕುಂಠವ ಬಿಟ್ಟು ಮೋಹನ ವಿಠ್ಠಲ

ಧರೆಯೊಳು ಬೋರೆಯ ಮರದಡಿಯಲಿರುವುದು ||3||

**


SriMohanadasarya virachita Sri vedavyasadevara stotra pada


Raaga : Kambodhi

Aaditaala


Yeno ee vesha vedavyasa||p||


Banu koti prakashaa badari nivasa||A.P||


Mutthu manikya mukuta veere

netthili genjade potthi kondippudhu|1|


drowpathi kareyalapaarvasthravanitthe

kowpina dharisidha kouthukavenayya|2|


vara vaikuntavannu bittu mohana vittalanna

dhareyolu poreya maradhadili iruvudhu|3|

** 

Comments