ರಾಮ ಕೃಷ್ಣ ವಾಸುದೇವ ಗೋಪಿಕೃಷ್ಣ ಉಡುಪಿ ಕೃಷ್ಣ MANGALA HADU ramakrishna vasudeva gopikrishna udupikrishna
Restart mobile & try if the above audio is not playing
ರಾಮ ಕೃಷ್ಣ ವಾಸುದೇವ ಗೋಪಿಕೃಷ್ಣ ಉಡುಪಿ ಕೃಷ್ಣ ।
ದೇವಕೀ ಸಹಿತ ಕೃಷ್ಣನ ಹಸೆಗೆ ಕರೆಯುವ।।
ರುಕ್ಮಿಣೀ ಸಹಿತ ಕೃಷ್ಣನ ಹಸೆಗೆ ಕರೆಯುವ।।ಪ।।
ಬಾಲಕೃಷ್ಣ ಮೂಡಿಬರಲಿ ಮಗಳೆ ನಿನ್ನ ಉದರದಲ್ಲಿ ।
ಸ್ವಾಮಿ ಹನುಮನಾಶೀರ್ವಾದ ಜೊತೆಗೆ ದೊರೆಯಲಿ ।।೧।।
ಜೀವಕೊಂದು ದೇಹವನ್ನು ದೇಹಕೊಂದು ರಕ್ಷೆಯನ್ನು
ಅಕ್ಷರಾದಿ ರೂಪ ದೇವ ಸಾಕ್ಷಾತ್ಕರಿಸಲಿ।।೨।।
ಸತ್ವವಿರುವ ತತ್ವವನ್ನು ತಾತ್ವಿಕ ಭಕ್ತಿಯನ್ನು ।
ತತ್ವಾಭಿಮಾನಿ ದೇವತೆಗಳು ನಿತ್ಯ ನೀಡಲಿ ।।೩।।
ವಂಶವೃಕ್ಷ ಗಟ್ಟಿಯಾಗಿ ವಂಶಾಭಿವೃದ್ಧಿ ಅಧಿಕವಾಗಿ ।
ಸಂಶಯವಿಲ್ಲದೆ ವಂಶವಾಹಿನಿ ಬೆಳೆದು ನಿಲ್ಲಲಿ ।।೪।।
ಮಂಗಳವಾಗಲಿನ್ನು ಮಂಗಳಗೌರಿ ನಿನಗೆ ।
ಸುಮಂಗಲೀ ಮಾನ್ಯರೆಲ್ಲ ಮುದದಿ ಹರಸಲಿ ।।೫।।
ರಾಮ ಕೃಷ್ಣ ವಾಸುದೇವ ಗೋಪಿಕೃಷ್ಣ ಉಡುಪಿ ಕೃಷ್ಣ ।
ದೇವಕೀ ಸಹಿತ ಕೃಷ್ಣ ಹಸೆಗೆ ಬಂದರು
ರುಕ್ಮಿಣೀ ಸಹಿತ ಕೃಷ್ಣ ಹಸೆಗೆ ಬಂದರು ।।ಪ।।
***
.jpeg)
Comments
Post a Comment