ಕಾವೇರಿ ಕಲುಷಹಾರಿ ಪಾವನ ಶರೀರೆ jagannatha dasaru kaveri kalushahari pavana shareere
Restart mobile & try if the above audio is not playing
ಶ್ರೀಜಗನ್ನಾಥದಾಸರ ಕೃತಿ ಕಾವೇರಿ ನದಿಯ ಸ್ತೋತ್ರ ಪದ
ರಾಗ : ನಾಟ ಆದಿತಾಳ
ಕಾವೇರಿ ಕಲುಷಹಾರಿ
ಪಾವನ ಶರೀರೆ ಶುಭತೋಷಕಾರಿ ||pa||
ಶ್ರೀ ವಾಸುದೇವ ರಂಗೇಶನಾಲಯಕೆ ನೀ
ಆವರಣಳಾಗಿಪ್ಪೆ ವಿರಜೆಯಂತೇ
ದೇವ ಋಷಿ ಗಂಧರ್ವ ಪಿತೃಪ ನರವರರಿಂದ
ಸೇವನೀಯಳಾಗಿ ಸರ್ವಾರ್ಥ ಪೂರೈಪೆ ||1||
ರವಿ ತುಲಾರಾಶಿಗೈದಿದ ಸಮಯದೊಳಗೊಂದು
ದಿವಸ ಮಜ್ಜನ ಗೈವ ಮಾನವರಿಗೆ
ಪವನಾಂತರಾತ್ಮಕನ ಪಾದಕಮಲವ ತೋರಿ
ಭವಜ ರೋಗವ ಕಳೆದು ಭಾಗ್ಯವಂತರ ಮಾಳ್ಪೆ ||2||
ಮೂಢಮತಿ ನಾನು ಕೊಂಡಾಡ ಬಲ್ಲೆನೆ ನಿನ್ನ
ಬೇಡಿಕೊಂಡೆನು ಹೃದಯ ನೀಡದೊಳಗೇ
ಗೂಡ ಪದ ಶಯನ ಜಗನ್ನಾಥ ವಿಠ್ಠಲನಂಘ್ರಿ
ನೋಡುವ ಸೌಭಾಗ್ಯ ದಯ ಮಾಡು ಪ್ರತಿದಿನದಲ್ಲಿ ||3||
ಚಿಟ್ಟೆಸ್ವರ
(ಮಧ್ಯಮಕಾಲ)
ಪಾನಿಪ ಮಪನೀಪಮಗಮಪನಿಪಾ
ಮಪಮಗಾಮರಿಸ ರಿಗಮಪದನಿಸ
ಸರಿಗಮರೀಸನಿ ಪನಿಸರಿಸಾನಿಪ
ಮರಿಸನಿಪ .... ರಿಸನಿಪಮ... ಸನಿಪಮರಿಸ ॥ಕಾವೇರಿ॥
**

Comments
Post a Comment