ಗಂಗಾಧರ ಹರ ಪಾಲಯಮಾಂ indiresharu huchchacharyaru gangadhara hara palayamam

Restart mobile & try if the above audio is not playing


ಶ್ರೀ huchchacharyaru

ಇಂದಿರೇಶಾಂಕಿತ ರುದ್ರದೇವರ ಕೃತಿ

ರಾಗ : ಶಹನ    ತಾಳ : ಆದಿತಾಳ


ಗಂಗಾಧರ ಹರ ಪಾಲಯಮಾಂ ಭವ

ಮಂಗಲದಾಯಕ ಪಾಲಯ ಮಾಂ ॥ಪ॥


ಚಿತ್ತ ನಿಯಾಮಕ, ಹೃತ್ತಮೋನಾಶಕ

ಭಕ್ತ ಜನೇಷ್ಟದ ,ಭೋಗಿಪದ ॥೧॥


ನಂದಿವರಾಸನ , ಚಂದ್ರವಿಭೂಷಣ

ಕಂಧರ ಕಾಳಿಯ ,ಕಾಮಿತದ॥೨॥


ಗಗನವಸನ ಎನ್ನಗಣಿತ ಪಾಪವ

ವಿಗಣಿಸುವದು ಇದು ನೀತೆ ॥೩॥


ಫಾಲನಯನ ಹರಿಲೀಲೆಯ ಸ್ಮರಿಸುತ

ಲೋಲ್ಯಾಡುವ ಸುಖ ನೋಡೋ ॥೪॥


 ಇಂದಿರೇಶನ ಪದ ದ್ವಂದ್ವ ಭಜಕ ಭವ

ಬಂಧನ ಬಿಡಿಸುವುದಿಲ್ಲೆ ॥೫॥

** 

Comments