ನಂಬಿದೆ ನಂಬಿದೆ ಅಂಬುಜಾಕ್ಷ ನಿನ್ನ helavanakatte giriyamma nambide nambide ambujaksha
Restart mobile & try if the above audio is not playing
ಹೆಳವನಕಟ್ಟೆ ಗಿರಿಯಮ್ಮನವರ ಕೃತಿ
ರಾಗ : ಕಾಪಿ ಆದಿತಾಳ
ನಂಬಿದೆ ನಂಬಿದೆ ಅಂಬುಜಾಕ್ಷ ನಿನ್ನ
ನಂಬಿದೆ ನಂಬಿದೆ ನಂಬಿದೆನಯ್ಯ ॥ಪ॥
ಮೊರೆಯಿಡೆ ದ್ರೌಪದಿ ತ್ವರಿತದಿ ಪೋಗುತ
ಪೊರೆದ ಮಹಾನುಭಾವ ಮುರಹರ ನಿನ್ನ ॥೧॥
ಶಕ್ತನೆ ನಿನ್ನಯ ಭಕ್ತಿಯಿಂ ಭಜಿಸುವೆ
ಭಕ್ತರಿಗೆಲ್ಲ ನೀನು ಮುಕ್ತಿಕೊಡುವೆ ಎಂದು ॥೨॥
ಧರೆಯೊಳು ರಾಜಿಪ ವರ ಹೆಳವನಕಟ್ಟೆ
ಗಿರಿಯೊಳು ನೆಲೆಸಿಹ ಪರಮ ಪುರುಷ ರಂಗಾ ॥೩॥
**

Comments
Post a Comment