ಕಡೆಗಣ್ಣಿನಲಿ ನೀ ನೋಡದಿರೆನ್ನಯ್ಯಾ helavanakatte giriyamma kadeganninali nee nodadirennayya

 

Restart mobile & try if the above audio is not playing

ಹೆಳವನಕಟ್ಟೆ ಗಿರಿಯಮ್ಮನವರ ಕೃತಿ

ರಾಗ : ಭಾಗೇಶ್ರೀ    ಆದಿತಾಳ


ಕಡೆಗಣ್ಣಿನಲಿ ನೀ ನೋಡದಿರೆನ್ನಯ್ಯಾ

ಬಿಡಬೇಡವೋ ಕೈಯ್ಯಾ ॥ಪ॥


ಬಡವರ ಬಂಧು ಬಹು ಕೃಪಾಸಿಂಧು

ಒಡೆಯ ನೀನಲ್ಲದೆ ನಮಗೆ ಬ್ಯಾರಿಲ್ಲವೋ ॥ಅ.ಪ॥


ಶತ ಅಪರಾಧವ ಮಾಡಿದೆನಯ್ಯ । ಸೇರಿದೆ ನಾ ನಿನ್ನ ಬೆನ್ನಾ

ಅತಿಪಾತಕಿ ಅಜಾಮಿಳನುದ್ಧರಿಸಿದೆ

ಪೃಥಿವಿಯೊಳಗೆ ಬಿರುದಾಂಕಿತ ಶ್ರೀಕಾಂತ ॥೧॥


ನೆಲೆಗಾಣದೆ ನಾನಾ ಪರಿ ಚಿಂತಿಸಿ । ಒಳಗಾದೆನೊ ಹೀಗೇ

ಬಳಲಿಸಬ್ಯಾಡವೋ ಭಕ್ತಕುಟುಂಬಿ

ನಳಿನದಳಾಂಬಕ ನೀ ಸಲಹೆನ್ನನು ॥೨॥


ಸಾರಿ ಹೇಳುವೆ ಎನ್ನಯ ಬಳಗದ । ಆರಾಭಾರ ನಿನ್ನದು

ಹೇರೊಪ್ಪಿಸಿದ ಮ್ಯಾಲೆ ಯಾತರ ಸುಂಕವು

ಕಾರುಣ್ಯನಿಧಿ ಹೆಳವನಕಟ್ಟೆ ರಂಗಯ್ಯಾ ॥೩॥

**

Comments