ಪದುಮನಾಭನೆ ನಿನ್ನ ಪಾದ ಕಿಂಕರ ನನ್ನು helavanakatte giriyamma padumanabhane ninna pada
Restart mobile & try if the above audio is not playing
ಹೆಳವನಕಟ್ಟೆ ಗಿರಿಯಮ್ಮನವರ ಕೃತಿ (ಸಂದರ್ಭೋಚಿತ ಕೃತಿ)
ರಾಗ : ಪೂರ್ವಿಕಲ್ಯಾಣಿ ಆದಿತಾಳ
ಪದುಮನಾಭನೆ ನಿನ್ನ ಪಾದ ಕಿಂಕರ ನನ್ನು
ಕೈಬಿಡುವುದು ಉಚಿತವೇ ರಂಗ ॥ಪ॥
ಮುದದಿಂದ ನಿನ್ನ ಪಾದಗೆರಗುವೆ ನಾನು ತ್ವರಿ-
ತದಿ ನೀ ಕಾಯೊ ಎನ್ನೊಡೆಯ ರಂಗ ॥ಅ.ಪ॥
ಅಜಗರಶಯನನೆ ಬುಧಜನ ನಮಿತನೆ
ತ್ರಿಜಗವಂದಿತಪಾದ ಪದುಮಜ ಜನಕನೆ ॥೧॥
ಶಿಶು ಅವತಾರದಿ ಪಶುಗಳ ಸಲಹಿದೆ
ಶಶಿಭೂಷಣಸಖ ಶಿಶುವ ಕಾಪಾಡೊ ॥೨॥
ಸಾಂದೀಪಗನಿಗೊಲಿದೆ ಸಂದೇಹವಿಲ್ಲ
ತಂದೆ ಹೆಳವನಕಟ್ಟೆ ರಂಗ ಕೃಪಾಂಗ ॥೩॥
**

Comments
Post a Comment