ಕರುಣಿಸೈ ಶ್ರೀ ರಾಮ ಕೌಸಲ್ಯ ಪ್ರೇಮ haridasini ambabai karunisai srirama kausalya

 

Restart mobile & try if the above audio is not playing

ಹರಿದಾಸಿನಿ ಅಂಬಾಬಾಯಿಯವರ ಕೃತಿ

ರಾಗ : ನಾದನಾಮಕ್ರಿಯ     ತಾಳ : ಖಂಡಛಾಪು


ಕರುಣಿಸೈ ಶ್ರೀ ರಾಮ ಕೌಸಲ್ಯ ಪ್ರೇಮ

ಶರಣ ಜನಕನು ಪೊರೆವ ಕಾರುಣ್ಯಧಾಮ || ಪಿಎ ||


ದಶರಥಾತ್ಮಜ ಯಜ್ಞ ಕಾಯ್ದು ಸೀತೆಯ ವರಿಸಿ

ಕುಶಲದಿಂದಲಿ ಬಂದು ಪ್ರತಿಯೊಬ್ಬರಲೂ

ದಶರಥನ ಸೂಚನೆಯಲಿ ಸತಿ ಅನುಜ ಸಹ ವನದಿ

ನಸುನಗುತ ಚರಿಸಿ ರಕ್ಕಸರ ಸದೆ ಬಡಿದೆ || 1 ||


ಸತಿಯೆ ಕಳೆದಿರೆ ಹನುಮ ಹಿತವಾರ್ತೆ ಬಿನೈಸೆ

ಹತಗೈದು ರಾವಣಾದಿಗಳನೆಲ್ಲ

ಹಿತದ ರಾಜ್ಯದ ವಿಭೀಷಣ ರವಿಜರಿಗೆ ಇತ್ತು

ವ್ರತ ಬಿಡಿಸಿ ಭರತನಿಗೆ ಧರಣಿಯಾಳಿದನೇ || 2 ||


ಪಟ್ಟಾಭಿರಾಮ ಮಂಗಳ ನಾಮ ಕೃಪೆಯಿಂದ

ಇಷ್ಟಾರ್ಥವೀಯೊ ಸನ್ಮಂಗಳವನೂ

ದಿಟ್ಟ ಶ್ರೀ ಹನುಮ ವಂದಿತ ಚರಣ ನಮಿಸುವೆನು

ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೇ || 3 ||

**

Comments