ನಂಬಿ ಕೆಟ್ಟವರಿಲ್ಲವೋ ರಾಯರ gurujagannatha dasaru nambi kettavarillavo rayara

Restart mobile & try if the above audio is not playing

ಶ್ರೀ gurujagannatha dasaru

ರಾಗ ವಲಚಿ


ನಂಬಿ ಕೆಟ್ಟವರಿಲ್ಲವೋ ರಾಯರ ಪಾದಾ

ನಂಬದೆ ಕೆಡುವುರುಂಟೋ ||pa||


ನಂಬಿದ ಜನರಿಗೆ – ಬೆಂಬಲ ತಾನಾಗಿ

ಹಂಬಲಿಸಿದ ಫಲ – ತುಂಬಿ ಕೊಡುವರನ್ನ ||a.pa||


ಜಲಧರ ದ್ವಿಜವರಗೆ ತಾನೇ ಒಲಿದು

ಸುಲಭದಿ ಮುಕುತಿಯನಿತ್ತ

ಚಲುವ ಸುತನ ಪಡೆದಲಲನೆಗೆ ತ್ವರದಿಂದ

ಪುಲಿನ ಗರ್ತದಿ ದಿವ್ಯ – ಜಲವ ನಿತ್ತವರನ್ನ ||1||


ಮೃತ್ಯುದೂತರು ತನ್ನನು ಪೊಂದಿದ ನಿಜ

ಭೃತ್ಯನ ಕರೆದೊಯ್ಯಲು

ಸತ್ತ ದ್ವಿಜನ ತಾನು – ಮತ್ತು ಧsರೆಗೆ ತಂದು

ಮೃತ್ಯು ಬಿಡಿಸಿ ಸುಖ – ವಿತ್ತು ಪೊರೆದಿಹರನ್ನಾ ||2||


ಧಿಟ ಗುರುಜಗನ್ನಾಥ ವಿಠಲನೊಲಿಮೆ

ಘಟನವಾದುದರಿಂದ

ಘಟನಾಘಟನ ಕಾರ್ಯ – ಘಟನಾ ಮಾಡುವ ನಮ್ಮ

ಪಟು ಗುರುವರ ಹೃ – ತ್ಪುಟ ದಿರುವೋರನ್ನ ||3||

**

Comments